ಕಾರು ಮತ್ತು ಲಾರಿ ನಡುವೆ ಡಿಕ್ಕಿ ಶಹಾಪುರದ ಇಬ್ಬರು ಯುವಕರ ಸಾವು
ಅಪಘಾತಃ ಶಹಾಪುರದ ಇಬ್ಬರು ಯುವಕರ ಸಾವು
ಕುಷ್ಟಗಿಃ ತಾಲೂಕಿನ ಕುಷ್ಟಗಿಯಿಂದ ಗಜೇಂದ್ರಗೆ ಮಾರ್ಗದ ಮೂಲಕ ಕಾರೊಂದು ತೆರಳುತ್ತಿರುವಾಗ ಎದುರಗಡೆ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಲ್ಟಿಗಾ ಕಾರ್ ನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇನ್ನುಳಿದ ನಾಲ್ವರಿಗೆ ತೀವ್ರ ಗಾಯಗಳಾದ ಘಟನೆ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ಎಲ್ಟಿಗಾ ಕಾರಿನಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಯುವಕರು ಪ್ರವಾಸಕ್ಕೆಂದು ಹೊರಟಿದ್ದಾರೆನ್ನಲಾಗಿದೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಮಲ್ಲಣ್ಣಗೌಡ ತಂದೆ ನಿಂಗಣ್ಣಗೌಡ ಪೋ.ಪಾಟೀಲ್ ಸಾ.ದೊಡ್ಡಸಗರ (20) ಮತ್ತು ಇನ್ನೋರ್ವ ವೀರೇಶ ಅಥವಾ ಗುರು ಎಂದು ಹೇಳಲಾಗುತ್ತಿದೆ ಈ ಹುಡುಗನಕುರಿತು ಗುರುತು ವಿಳಾಸ ಸಮರ್ಪಕವಾಗಿ ತಿಳಿದು ಬಂದಿಲ್ಲ. ಯಾವ ಗ್ರಾಮ ಎಂಬುದು ತಿಳಿದು ಬಂದಿಲ್ಲ..(21) ಎಂದು ಮೂಲಗಳು ತಿಳಿಸಿವೆ. ಇನ್ನುಳಿದ ನಾಲ್ವರು ಶಹಾಪುರದವರೆ ಆಗಿದ್ದು, ಅವರಿಗೆ ತೀವ್ರಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.