ಕಾರ್-ಟಂಟಂ ಮುಖಾ ಮುಖಿ ಡಿಕ್ಕಿ ಇಬ್ಬರ ಸಾವು
ಕಲಬುರ್ಗಿಃ ಟಂಟಂ-ಕಾರ್ ಪರಸ್ಪರ ಡಿಕ್ಕಿ ಇಬ್ಬರ ಸಾವು
ಕಲಬುರ್ಗಿಃ ಕಾರ್ ಮತ್ತು ಟಂಟಂ ಆಟೋ ನಡುವೆ ಮುಖಾಮುಖಿ ಡಿಕ್ಕಿ ನಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಚವಡಾಪುರ ಗ್ರಾಮದ ಬಳಿ ನಡೆದಿದೆ.
ಅಪಘಾತ ಸಂದರ್ಭ ಟಂಟಂನಲ್ಲಿದ್ದ ಬೋರಮ್ಮ ಶಿರೂರಮಠ(30) ಮತ್ತು ಮಹೇಶ ಶೆಟ್ಟಿ (25) ಇಬ್ಬರು ಮೃತ ದುರ್ದೈವಿಗಳು. ಮೃತರ ವಿಳಾಸ ಸಂಪೂರ್ಣ ವಿವರ ಇನ್ನೂ ತಿಳಿದು ಬಂದಿಲ್ಲ. ಆದರೆ ಬೋರಮ್ಮ ಕಲಬುರ್ಗಿ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಮಹೇಶ ಗಾಣಗಾಪುರ ಪಟ್ಟಣ ನಿವಾಸಿ ಎನ್ನಲಾಗಿದೆ. ಮೃತರ ಸಂಬಂಧಿಕರು ಬಂದ ಮೇಲೆಯೇ ಪೂರ್ಣ ವಿವರ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಇವರು, ಕಲಬುರ್ಗಿಯಿಂದ ಟಂಟಂನಲ್ಲಿ ಅಫಜಲಪುರ ತಾಲೂಕಿನ ಚಿನ್ಮಯಗಿರಿ ದೇವಸ್ಥಾನದ ಜಾತ್ರೆಗೆ ಹೊರಟಿದ್ದರು ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಸಮೀಪದ ಗಾಣಗಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಣಗಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿನ್ಮಯಗಿರಿ ಜಾತ್ರೆಗೆ ಹೊರಟಿದ್ದ ಭಕ್ತರಿಬ್ಬರ ಸಾವುಃ ಸಾರ್ವಜನಿಕರಿಂದ ಕಂಬನಿ
ಚಿನ್ಮಯ ಗಿರಿ ಜಾತ್ರೆಗೆ ಹೊರಟಿದ್ದವರು ಮಾರ್ಗಮಧ್ಯೆ ಅಪಘಾತ ಸಂಭವಿಸಿ ಮೃತರಾದ ಸುದ್ದಿ ತಿಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಕಂಬನಿ ಮಿಡಿದಿದ್ದಾರೆ. ವಿಷಯ ತಿಳಿದ ಸ್ಥಳೀಯರು ಅಪಘಾತದಲ್ಲಿ ಮೃತರಾದ ಯುವ ಭಕ್ತರನ್ನು ಕಂಡು ಮರುಗಿದ್ದಾರೆ. ಚಿನ್ಮಯಗಿರಿ ವಾಸನ ದರ್ಶನ ಭಾಗ್ಯ ದೊರೆಯದೇ ದಾರಿಯಲ್ಲಿ ಕಣ್ಮರೆ ಆಗುವಂತೆ ಮಾಡಿದ ದೇವರನ್ನು ಮಹಿಳೆಯರು ಶಪಿಸಿದ್ದಾರೆ. ಬೆಳ್ಳಂಬೆಳಗ್ಗೆ ಮುಂಜಾವಿನ ಮಂಜಿನಲ್ಲಿ ಘಟನೆ ವಿಷಯ ತಿಳಿದ ಹಿರಿಯರ ಮೈಚಳಿ ಬಿಟ್ಟಂತಾಗಿದೆ. ಮಳೆಯರ ಬಾಯಿಯಲ್ಲಿ ಪಾಪ ಹೀಗಾಗಬಾರದಿತ್ತು..ಎಂಬುದೇ ಶ್ಲೋಗನ್ ಹಾಗಿದೆ.