Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಕ್ಯಾರೆಟ್ ನ ತಿನ್ನುವುದರಿಂದ ತುಂಬಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

(Carrot:) ತೆಳ್ಳಗೆ ಬೆಳ್ಳಗೆ ಕಾಣುವ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ. ಈ ಮಧ್ಯೆ ಕಿತ್ತಳೆ ಬಣ್ಣದಲ್ಲಿ ಎಲ್ಲರನ್ನೂ ಆಕರ್ಷಿಸುವ ಮತ್ತು ಆರೋಗ್ಯಕ್ಕೆ ಊಹೆಗೂ ಮೀರಿ ಒಳ್ಳೆಯ ಪ್ರಯೋಜನಗಳನ್ನು ಒದಗಿಸುವ ತರಕಾರಿ ಎಂದರೆ ಅದು ಕ್ಯಾರೆಟ್.

ಇದು ಸವಿಯಲು ರುಚಿಕರವೂ ಹೌದು, ಹಾಗೆ ಆರೋಗ್ಯಕರವೂ ಹೌದು. ಕ್ಯಾರೆಟ್ ತಿನ್ನುವುದರಿಂದ ಹಲವಾರು ಆಯಾಮಗಳಲ್ಲಿ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಸಾಮಾನ್ಯವಾಗಿ ಯಾರು ಸಹ ಕ್ಯಾರೆಟ್ ಬೇಡ ಎಂದು ಹೇಳುವುದಿಲ್ಲ. ಹಾಗಾಗಿ ಇದನ್ನು ಸರ್ವ ಸ್ನೇಹಿ ತರಕಾರಿ ಎಂದು ಕರೆಯಬಹುದು.

ಒಂದು ಕಿತ್ತಳೆ ಬಣ್ಣದ ಕ್ಯಾರೆಟ್ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ನೋಡುವುದಾದರೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಉತ್ತಮ:
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಜ್ಯೂಸ್ ತಯಾರಿಸಿ ಸೇವಿಸಿದರೆ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ. ದೃಷ್ಟಿ ಸ್ಪಷ್ಟವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ:
ಮಧುಮೇಹಿಗಳು ಕ್ಯಾರೆಟ್ ಜ್ಯೂಸ್ ಸೇವಿಸಿದರೆ ಅವರ ಶುಗರ್ ನಿಯಂತ್ರಣದಲ್ಲಿರುತ್ತದೆ.

ಆಂಟಿ ಆಕ್ಸಿಡೆಂಟ್ ಒತ್ತಡವನ್ನು ನಿವಾರಿಸಲು ಉತ್ತಮ:
ಹೃದಯದ ಸಮಸ್ಯೆ ಇರುವವರು ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕ್ಯಾರೆಟ್ ಸೇವಿಸಿ.ಕ್ಯಾರೆಟ್ ನಲ್ಲಿ ಫೈಬರ್ ಅಧಿಕವಾಗಿದೆ. ಇದು ನಿಮ್ಮ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ. ಹಾಗಾಗಿ ತೂಕ ಹೆಚ್ಚಳ ಸಮಸ್ಯೆ ಅನುಭವಿಸುವವರು ಕ್ಯಾರೆಟ್ ಸೇವಿಸಿ ತೂಕವನ್ನು ಇಳಿಸಿಕೊಳ್ಳಬಹುದು.

Related Articles

Leave a Reply

Your email address will not be published. Required fields are marked *

Back to top button