ಪ್ರಮುಖ ಸುದ್ದಿ
ಐವರು ವಿದ್ಯಾರ್ಥಿಗಳ ಸಾವು ಪ್ರಕರಣ : ಮೂವರ ವಿರುದ್ಧ ಕೇಸ್ ದಾಖಲು
ಕೊಪ್ಪಳ : ನಗರದ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ದ್ವಜಸ್ಥಂಭ ಸ್ಥಳಾಂತರ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ನಗರ ಠಾಣೆ ಪೊಲೀಸರು ಈಗಾಗಲೇ ಹಾಸ್ಟಲ್ ವಾರ್ಡನ್ ಬಸವರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಾರ್ಡನ್ ಬಸವರಾಜ್ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇನ್ನು ಈ ಬಗ್ಗೆ ದೇವಪ್ಪ ಮೇಟಿ ಎಂಬುವರು ದೂರು ನೀಡಿದ್ದು ಹಾಸ್ಟೆಲ್ ವಾರ್ಡನ್ ಬಸವರಾಜ್, ಹಾಸ್ಟಲ್ ಗೆ ಬಾಡಿಗೆ ನೀಡಿದ್ದ ಕಟ್ಟಡದ ಮಾಲೀಕ ಬಸನಗೌಡ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಐಪಿಸಿ ಕಲಂ 304(ಎ), 128 ಅಡಿಯಲ್ಲಿ ದೂರು ದಾಖಲಾಗಿದೆ. ಕೊಪ್ಪಳ ನಗರ ಠಾಣೆಯ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.