ಪ್ರಮುಖ ಸುದ್ದಿ
ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ನೇಮಕ ತಡೆಗೆ ಸಿಎಟಿ ನಕಾರ
ಬೆಂಗಳೂರು : ತಮ್ಮ ಸ್ಥಾನಕ್ಕೆ ರಾಜ್ಯ ಸರ್ಕಾರ ನಗರ ಪೊಲೀಸ್ ಆಯುಕ್ತರಾಗಿ ಬಾಸ್ಕರ್ ರಾವ್ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ, ತಡೆ ನೀಡುವಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಸಿಎಟಿ (ಆಡಳಿತಾತ್ಮಕ ನ್ಯಾಯ ಮಂಡಳಿ) ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸಿಎಟಿ ತಡೆ ನೀಡಲು ನಿರಾಕರಿಸಿದೆ . ಪ್ರಕರಣಕ್ಕೆ ಸಂಭಂದಿಸಿದಂತೆ ಕೇಂದ್ರ ಸರ್ಕಾರ , ರಾಜ್ಯ ಸರ್ಕಾರ ಹಾಗೂ ನೂತನ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಅವರಿಗೆ ನೋಟಿಸ್ ನೀಡಿರುವ ಸಿಎಟಿ ಆಗಷ್ಟ್ 14ಕ್ಕೆ ವಿಚಾರಣೆ ಮುಂದೂಡಿದೆ.