ಪ್ರಮುಖ ಸುದ್ದಿ
ಪರಿಸರ ನಾಶ : ನಟ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಚಿತ್ರೀಕರಣಕ್ಕೆ ಬ್ರೇಕ್!
ಕೋಲಾರ : ನಟ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾ ಚಿತ್ರೀಕರಣಕ್ಕೆ ಕೆಜಿಎಫ್ ಸಿವಿಲ್
ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಕೆಜಿಎಫ್ ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ಸಿನೆಮಾದ ಚಿತ್ರೀಕರಣ ನಡೆಯುತ್ತಿದ್ದು ದೊಡ್ಡದಾದ ದುಬಾರಿ ಸೆಟ್ ಹಾಕಲಾಗಿದ್ದು ಸೆಟ್ ಹಾಕುವ ವೇಳೆ ಗುಡ್ಡದ ಮೇಲಿರುವ ಗಿಡ ಮರಗಳನ್ನು ನಾಶಪಡಿಸಿ ಪರಿಸರ ಹಾನಿ ಮಾಡಲಾಗಿದೆ. ಅಲ್ಲದೆ ಚಿತ್ರೀಕರಣದಿಂದ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ . ಕೂಡಲೇ ಚಿತ್ರೀಕರಣಕ್ಕೆ ತಡೆಯಬೇಕೆಂದು ಶ್ರೀನಿವಾಸ್ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು. ಶ್ರೀನಿವಾಸ್ ಅವರ ಅರ್ಜಿ ಪರಿಶೀಲಿಸಿದ ನ್ಯಾಯಾಲಯ
ಕೆಜಿಎಫ್-2 ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.