ಶಹಾಪುರಃ ಕಸಾಪ ಭವನದಲ್ಲಿ ವಿಶ್ವ ಸ್ನೇಹ ದಿನಾಚರಣೆ
ವಿಶ್ವ ಸ್ನೇಹ ದಿನಾಚರಣೆ
ಗೆಳೆಯರಿಲ್ಲದ ಜೀವನ ಊಹಿಸಲು ಅಸಾಧ್ಯ: ಮುಲ್ಲಾ
ಶಹಾಪುರ: ಗೆಳೆಯರಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಸಂಘ ಜೀವಿಯಾದ ಮನುಷ್ಯನಿಗೆ ಸ್ನೇಹಿತರ ಸಂಘ ಇರಲೇಬೇಕು ಎಂದು ಮುಡಬೂಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹಾಗೂ ಚಿಂತಕ ಮುರ್ತುಜಾ ಮುಲ್ಲಾ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಸೃಜನಶೀಲ ಸಾಹಿತ್ಯ ಹಾಗೂ ಸಾಂಸ್ಕøತಿಕ ಬಳಗ ಆಯೋಜಿಸಿದ್ದ “ವಿಶ್ವ ಸ್ನೇಹಿತರ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರ ಆಸಕ್ತಿ, ವಿಚಾರಗಳು ಬೇರೆ ಬೇರೆಯಾಗಿದ್ದರೂ, ಸಹ ಜೀವನದಲ್ಲಿ ಸ್ನೇಹಿತರ ಆಸರೆ ಅತ್ಯವಶ್ಯಕವಾಗಿರುತ್ತದೆ. ಸಮಯ-ಸಂದÀರ್ಭಗಳಲ್ಲಿ ಸುಖ-ದು:ಖಗಳನ್ನು ಹಂಚಿಕೊಳ್ಳಲು ಬದುಕಿನ ಹಲವಾರು ಬವಣೆÉಗಳಿಗೆ ಪರಿಹಾರ ಕಂಡುಕೊಳ್ಳಲು ಗೆಳತನ ತುಂಬಾ ಅಗತ್ಯ. ಕೃಷ್ಣ-ಕುಚೇಲರ ಸ್ನೇಹ ಬಾಂಧವ್ಯ ನಿದರ್ಶನ ನೀಡಿದರು.
ಚಿತ್ರಕಲಾವಿದ ರುದ್ರಪ್ಪ ತಳವಾರ ಮಾತನಾಡಿ, ಬದುಕಿಗೆ ಆಸರೆ, ಸ್ಪೂರ್ತಿಯಾದ ತಮ್ಮ ಸ್ನೇಹಿತರ ಮಾನವೀಯತೆಯ ಕಾರ್ಯ ನೆನೆದು ಭಾವುಕತೆಗೆ ಒಳಗಾದರು. ಮಾನವೀಯ ಅನುಕಂಪ ತೋರಿದ ಸ್ನೇಹಿತರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕ ಸತೀಶ್ ತುಳೇರ್ ಮಾತನಾಡಿ, ಜೀವಕ್ಕೆ ಜೀವ ಬೆಸೆಯುವ ಗೆಳಯರಿಲ್ಲದಿದ್ದರೆ ಬದುಕು ಭಾರವಾಗುತ್ತದೆ. ನಮ್ಮ ಬದುಕಿನಲ್ಲಿ ಕೆಲವರು ಮಾತ್ರ ಆಪ್ತ ಸ್ನೇಹಿತರಾಗಿ ಉಳಿಯಲು ಸಾಧ್ಯವಿದೆ ಎಂದರು.
ರಂಗ ಕಲಾವಿದ ರಾಘವೇಂದ್ರ ದೇಸಾಯಿ ಮತ್ತು ಜಾನಪದ ಕಲಾವಿದ ಗೌಡಪ್ಪಗೌಡ ಹುಲಕಲ್ ಅವರು ಪರಿಶುದ್ದ ಸ್ನೇಹಕ್ಕೆ ಜಾತಿ, ಮತ, ಧರ್ಮ, ವಯಸ್ಸು ಯಾವುದರ ಹಂಗಿಲ್ಲ. ಅವೆಲ್ಲವುಗಳನ್ನು ಮೀರಿ ಬೆಳೆಯವುದೇ ಸ್ನೇಹ ಬಾಂಧವ್ಯ ಎಂದರು.
ಪತ್ರಕರ್ತ ವಿಶಾಲ ಸಿಂಧೆ, ಸುರೇಶ ಕಲ್ಮನಿ ಸೇರಿದಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಹಾಗೂ ಅಧ್ಯಾಪಕ ಡಾ. ಧರ್ಮಣ್ಣ ಬಡಿಗೇರ ಮಾತನಾಡಿದರು.
ಉಪನ್ಯಾಸಕ ರಾಘವೇಂದ್ರ ಹಾರಣಗೇರಾ, ಮಾನುಷ್ಯಯ ಐಕೂರ, ನಾಗರಾಜ ಹೊಸಕೇರಾ ಇತರರು ಉಪಸ್ಥಿತರಿದ್ದರು.