ಹಿರಿಯ ಸಾಹಿತಿ ನಾಗಣ್ಣ ತಿ.ಹಾರಣಗೇರಾ ಇನ್ನಿಲ್ಲ
ಹಿರಿಯ ಸಾಹಿತಿ ನಾಗಣ್ಣ ತಿ.ಹಾರಣಗೇರಾ ಇನ್ನಿಲ್ಲ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದವರಾ ಹಿರಿಯ ಸಾಹಿತಿ ನಾಗಣ್ಣ.ತಿ.ಹಾರಣಗೇರಾ ಅನಾರೋಗ್ಯದಿಂದ ನಿಧನರಾಗಿದ್ದು, ಶುಕ್ರವಾರ ಮದ್ಯಾಹ್ನ ಅವರ ಸ್ವಗ್ರಾಮದ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.
ನಾಗಣ್ಣ.ತಿ.ಹಾರಣಗೇರಾ ಅವರು ಉತ್ತಮ ಬರಹಗಾರರಾಗಿದ್ದು ಸಾಕಷ್ಟು ಪತ್ರಿಕೆ, ಮ್ಯಾಕ್ಸಿನ್ ಗಳಿಗೆ ಉತ್ತಮ ಲೇಖನ ಕಾವ್ಯಗಳನ್ನು ಬರೆದಿದ್ದಾರೆ.
ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ನಲ್ಲಿ ಸರ್ಕಾರಿ ನೌಕರನಾಗಿ ಕರ್ತವ್ಯ ನಿಭಾಯಿಸಿದ್ದ ಅವರು ಕಳೆದ 8-10 ವರ್ಷದಿಂದೆ ನಿವೃತ್ತ ಹೊಂದಿದ್ದರು. ಇವರು ನಾ.ತಿ.ಹಾರಣಗೇರಾ ಎಂದೆ ಖ್ಯಾತಿ ಹೊಂದಿದ್ದರು.
ನಾನು “ಶಹಾಪುರ ವಾಣಿ” ಪಾಕ್ಷಿಕ ಪತ್ರಿಕೆಯ ಉಪ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿರುವಾಗ ನಾನು ಆಗ ಬರೆಯುತ್ತಿದ್ದ “ಪ್ಯಾರ್ ಕಿ ಬಾತ್” ಅಂಕಣ ಮತ್ತು ಇತರೆ ಸುದ್ದಿ ಸ್ಟೋರಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿ ಪತ್ರಗಳನ್ನು ಬರೆಯುತ್ತಿದ್ದರು.
ಆಗ ನನಗೆ ಅವರು ಬರೆದ ಪತ್ರಗಳು ಖುಷಿ ಕೊಡುತಗತಿದ್ದವು ಬರವಣಿಗೆ ಮುಂದುವರೆಸಲು ನಾ.ತಿ.ಹಾರಣಗೇರಾ ಪತ್ರ ಪ್ರೋತ್ಸಾಹ ನೀಡಿದೆ ಅಂದರೆ ತಪ್ಪಾಗಲಾರದು.
ಕೆಲವೊಮ್ಮೆ “ಪ್ಯಾರ್ ಕಿ ಬಾತ್” ಅಂಕಣ ಬರೆಯದೆ ಇದ್ರೆ ಯಾಕೋ ಮಿಸ್ ಮಾಡಿದ್ದೀರಿ ಹಾಗೇ ಮಾಡದಿರಿ ನಿರಂತರ ಪ್ರತಿ ಪಾಕ್ಷಿಕ ದಲ್ಲಿ ನಿಮ್ಮ ಅಂಕಣ ಇರಬೇಕು ಎಂದು ಪತ್ರ ಬರೆಯುತ್ತಿದ್ದರು.
ಅಲ್ಲದೆ ಶಹಾಪುರ ವಾಣಿ ಸಂಪಾದಕರು ಹಾಗೂ ಮಾಲೀಕರಾಗಿದ್ದ ಈರಣ್ಣ ಹಾದಮನಿ (ಗೋಗಿ) ಅವರನ್ನು ಭೇಟಿಯಾದಾಗ ಮಲ್ಲು ಅವರಿಗೆ ಹೇಳಿ “ಪ್ಯಾರ್ ಕಿ ಬಾತ್” ನಿರಂತರ ಬರೆಯಲು ತಿಳಿಸಿ ಅವರ ಬರವಣಿಗೆ, ಕಲ್ಪನೆ ಚನ್ನಾಗಿದೆ ಎಂದು ಹೇಳಿ ಕಳುಹಿಸಿದ್ದರು.
ಇಂದು ನಮ್ಮೆಲ್ಲರನ್ನು ಅವರು ಬಿಟ್ಟು ಹೋಗಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಪ್ರೋತ್ಸಾಹ ನುಡಿ ನಮಗೆ ಪ್ರೇರಣೆಯಾಗಿದೆ.
ಅವರನ್ನು ಕಳೆದುಕೊಂಡ ಒಬ್ಬ ಪುತ್ರ ನಾಲ್ಕು ಜನ ಪುತ್ರಿಯರು ಸೇರಿದಂತೆ ಅವರ ಬಂಧು ಬಳಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ.
ನಾ.ತಿ.ಹಾರಣಗೇರಾ ಅವರು ನಮ್ಮ ವಿನಯವಾಣಿ ಬಳಗದ ಲೇಖಕ, ಯುವ ಸಾಹಿತಿ ರಾಘವೇಂದ್ರ ಹಾರಣಗೇರಾ ಅವರ ಚಿಕ್ಕಪ್ಪರಾಗಿದ್ದು, ದೇವರು ಹಾರಣಗೇರಾ ಬಳಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ತುಂಬಲಿ ಎಂದು ಮತ್ತೊಮ್ಮೆ ನಾನು ನಂಬಿದ ದೇವರಲ್ಲಿ ಪ್ರಾರ್ಥಿಸುವೆ.
– ಮಲ್ಲಿಕಾರ್ಜುನ ಮುದನೂರ.
ಸಂಪಾದಕರು. ವಿನಯವಾಣಿ.