ಪ್ರಮುಖ ಸುದ್ದಿ
ಸಿಸಿ ರಸ್ತೆ ಗುಣಮಟ್ಟದಿಂದ ಕೂಡಿರಲಿ-ಅಜೇಯ್ ಸಿಂಗ್
ನೆಲೋಗಿಯಲ್ಲಿ 30 ಲಕ್ಷ ವೆಚ್ಚದ ಸಿಸಿಗೆ ಶಾಸಕ ಸಿಂಗ್ ಚಾಲನೆ
ಕಲಬುರಗಿಃ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಮಗಾರಿ ಕಾಲಮಿತಿಯೊಳಗೆ ಸಂಪೂರ್ಣ ವಾಗಿ ಮುಗಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಅಜೇಯ್ ಸಿಂಗ್ ತಿಳಿಸಿದರು.
ಜಿಲ್ಲೆಯ ಜೇವಗಿ೯ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಬಡಾವಣಿಯಲ್ಲಿ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿಮಾ೯ಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಈ ಸಿಸಿ ರಸ್ತೆ ನಿರ್ಮಾಣದಿಂದ ಜನರ ಸಂಚಾರಕ್ಕೆ ತುಂಬಾ ಅನುಕೂಲವಾಗಲಿದೆ. ಪರಿಶಿಷ್ಟರು ವಾಸಿಸುವ ಬಡಾವಣೆ ಅಭಿವೃದ್ಧಿ ಗೆ ಬದ್ಧನಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಷಿನ ಸೌಲಭ್ಯ ಒದಗಿಸಿ ಕೊಡುವಲ್ಲಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಮತ್ತು ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮ್ ಪ್ರಭು ಪಾಟೀಲ ಉಪಸ್ಥಿತರಿದ್ದರು.




