ಪ್ರಮುಖ ಸುದ್ದಿ
ಪತ್ರಕರ್ತ ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ಕೇಸ್: ಭೀಮಾತೀರದಲ್ಲಿ ಸಿಸಿಬಿ ಟೀಮ್
ವಿಜಯಪುರ: ಹಾಯ್ ಬೆಂಗಳೂರ್ ಪತ್ರಿಕೆಯ ಗೌರವ ಸಂಪಾದಕ ರವಿ ಬೆಳಗೆರೆ ತಮ್ಮ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಸುನೀಲ್ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಪೊಲೀಸರಿಗೆ ಸುಳಿವು ನೀಡಿದ್ದ ಭೀಮಾತೀರಾದ ಹಂತಕ ಶಶಿಧರ್ ಮುಂಡೆವಾಡಿ ತನ್ನ ಜೊತೆಗೆ ಮತ್ತೋರ್ವ ಹಂತಕ ವಿಜು ಬಡಿಗೇರ್ ಹೆಸರನ್ನು ಪ್ರಕರಣದಲ್ಲಿ ತಳಕು ಹಾಕಿದ್ದಾನೆ.
ಸಿಸಿಬಿ ಪೊಲೀಸರು ಈಗ ವಿಜು ಬಡಿಗೇರ್ ಪತ್ತೆಗಾಗಿ ಜಾಲ ಬೀಸಿದ್ದಾರೆ. ಏಳು ಜನ ಅಧಿಕಾರಿಗಳ ತಂಡ ವಿಜಯಪುರದಲ್ಲಿ ಬೀಡು ಬಿಟ್ಟಿದ್ದು ಭೀಮಾತೀರದ ಹಂತಕರ ಅಡ್ಡೆಗಳನ್ನು ಜಾಲಾಡುತ್ತಿದೆ. ಸಿಂದಗಿ, ಇಂಡಿ, ಚಡಚಣ ಸೇರಿದಂತೆ ವಿವಿದೆಡೆ ಭೀಮಾ ತೀರದ ಹಂತಕ ಪಡೆಯ ತಂಗುದಾಣಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದೆ.