CD ಪ್ರಕರಣಃ ಸುದ್ದಿವಾಹಿನಿ ತಂತ್ರಜ್ಞ ಶ್ರವಣ್ ಮನೆ ಜಾಲಾಡಿದ SIT, ನಾಲ್ಕು ದಿನದಿಂದ ಕಾಣದ ಯುವಕ
CD ಪ್ರಕರಣಃ ಸುದ್ದಿವಾಹಿನಿ ತಂತ್ರಜ್ಞ ಶ್ರವಣ ಮನೆ ಜಾಲಾಡಿದ SIT, ನಾಲ್ಕುದಿನದಿಂದ ಕಾಣದ ಯುವಕ
ವಿಜಯಪುರಃ ರಮೇಶ ಜಾರಕಿಹೊಳಿ ಸಿಡಿಯ ಜಾಡು ಹಿಡಿದು ಹೊರಟ ಎಸ್ಐಟಿ ತಂಡ ಇಲ್ಲಿನ ಸುದ್ದಿವಾಹಿನಿಯೊಂದರ ತಾಂತ್ರಿಕ ಉದ್ಯೋಗಿ ಶ್ರವಣ್ ಎಂಬ ಯುವಕನ ಮನೆಯ ಮೇಲೆ ಶನಿವಾರ ಬೆಳಗಿನ ಜಾವ ದಾಳಿ ನಡೆಸಿ, ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಶ್ರವಣ್ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಅವರ ಬಸವೇಶ್ವರ ನಗರ ಮನೆಯಲ್ಲಿ ತಂದೆ ಮತ್ತು ಅಣ್ಣ ಶರಣ್ ಮಾತ್ರ ಇದ್ದರು ಎನ್ನಲಾಗಿದೆ.
ದಾಳಿ ವೇಳೆ 25 ಲಕ್ಷದ ಡಿಡಿ ಕೂಡ ಪತ್ತೆಯಾಗಿದೆ ಎನ್ನಲಾಗಿದ್ದು, ಅಲ್ಲದೆ ಸಿ.ಡಿ. ಪೆನ್ ಡ್ರೈವ್ ಸೇರಿದಂತೆ ಇತರೆ ವಸ್ತುಗಳು ವಶಕ್ಕೆ ಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಸರ್ವರ್ ಹ್ಯಾಕ್,ಸಿ.ಡಿ.ಎಡಿಟಿಂಗ್, ಅಪ್ ಲೋಡಿಂಗ್ ಕಾರ್ಯದಲ್ಲಿ ಈತ ಮೇನ್ ಆಗಿದ್ದು, ಪ್ರಭಾವಿ ರಾಜಕಾರಣಿಗಳೊಂದಿಗೂ ಶ್ರವಣ್ ಗುರುತಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಯಾವುದಕ್ಕೂ ಎಸ್ಐಟಿ ತಂಡ ತನಿಖೆ ನಂತರವೇ ಸತ್ಯಾಸತ್ಯತೆ ಹೊರ ಬೀಳಲಿದೆ ಎನ್ನಬಹುದು.