ಪ್ರಮುಖ ಸುದ್ದಿ
ಕಾಂಗ್ರೆಸ್ ಈಗ ಸಿಡಿ ತಯಾರಿಸುವ ಕಾರ್ಖಾನೆ- ಬಿಜೆಪಿ ಲೇವಡಿ
ಕಾಂಗ್ರೆಸ್ ಈಗ ಸಿಡಿ ತಯಾರಿಸುವ ಕಾರ್ಖಾನೆ- ಬಿಜೆಪಿ ಲೇವಡಿ
ವಿವಿ ಡೆಸ್ಕ್ಃ CD ಲೇಡಿ ಆಡಿಯೋ ರಿಲೀಸ್ ಆಗಿದ್ದು ಅದರಲ್ಲಿ ಮಹಾನಾಯಕನ ಕುರಿತು ಮಾತಾಡಿರುವದು ಅವರ ಮನೆ ಹತ್ರ ಬಂದಿದ್ದೇವೆ ಇನ್ನೇನು ಭೇಟಿ ಮಾಡಲಿದ್ದೇವೆ ಎಂದು CD ಲೇಡಿ ಅವರ ಸಹೋದರನ ಜೊತೆ ಮಾತಾಡಿರುವ ಆಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತು ಬಿಜೆಪಿ ಕಾಂಗ್ರೆಸ್ ಹೆಸರು ಹೇಳದೆ ಮಹಾನಾಯಕ ನಿಯಂತ್ರಿತ ಪಕ್ಷ ಸಿಡಿ ತಯಾರಿಸುವ ಕಾರ್ಖಾನೆಯಾಗಿದೆ ಎಂದು ಟ್ವಿಟ್ ಮಾಡಿದೆ.
ಮಹಾನಾಯಕ ನಿಯಂತ್ರಿತ ಪಕ್ಷ ಈಗ ಸಿಡಿ ತಯಾರಿಸುವ ಕಾರ್ಖಾನೆಯಂತಾಗಿದೆ. ಪ್ರಕರಣದ ಆರಂಭದಲ್ಲಿಯೇ ಮಹಾನಾಯಕ ಹಾಗೂ ಮಹಾನಾಯಕಿ ಇಬ್ಬರೂ ಹೆಗಲು ಮುಟ್ಟಿ ನೋಡಿ ಕೊಂಡಿದ್ದರು. ಮಹಾನಾಯಕನ ಆಟ ಬಯಲಾಗಿದೆ. ಮಹಾನಾಯಕಿ ಕುತಂತ್ರವು ಬಯಲಾಗಲಿ. ಎಂದು ಬಿಜೆಪಿ ಟ್ವಿಟ್ ಮಾಡಿದೆ.