ಪ್ರಮುಖ ಸುದ್ದಿ

ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಗದ್ದಲಃ ಸಾಹಿತಿ ಭಗವಾನ್ ಹೇಳಿಕೆಗೆ ಖಂಡನೆ

 

‘ಭಗವಾನ್ ’ ವಿರುದ್ಧ ರಾಮನ ಭಕ್ತರ ಆಕ್ರೋಶ

ಮೈಸೂರಃ 83 ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಅಲಕ್ಷಿತ ಜನಸಮುದಾಯ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತಿದ್ದ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಮ್ಮ ಉಪನ್ಯಾಸದಲ್ಲಿ ಶ್ರೀರಾಮನ ಕುರಿತು ರಾಮ ತನ್ನ ಆಳ್ವಿಕೆಯಲ್ಲಿ ತಪ್ಪು ಮಾಡಿದ್ದಾನೆ. ಆತ ಜಾತಿವ್ಯವಸ್ಥೆ ಮಾಡುತಿದ್ದ ಎಂದು ಹೇಳುತ್ತಿದ್ದಂತೆ, ಸಭಿಕರು ಭಗವಾನ್ ಹೇಳಿಕೆ ಖಂಡಿಸಿ ಘೋಷಣೆ ಕೂಗಿದರು. ಗದ್ದಲವೆಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದರು. ಅವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆಯೂ ಜರುಗಿತು.

ನಂತರ ಗೋಷ್ಠಿ ಮುಂದುವರೆಸಿದ ಭಗವಾನ್, ದೇವಸ್ಥಾನ, ಮಸೀದಿ ಮತ್ತು ಚರ್ಚ್‍ಗೆ ಹೋದರೆ ನೀವು ದಡ್ಡರಾಗುತ್ತೀರಾ. ಯಾರು ದೇವಸ್ಥಾನಕ್ಕೆ ಹೋಗಬೇಡಿ ಎಂದು ಬಿಟ್ಟಿ ಸಲಹೆ ನೀಡಿದರು. ಅಲ್ಲದೆ ತಾನು ದೇವಸ್ಥಾನಕ್ಕೆ ಹೋಗಿ 50 ವರ್ಷಗಳಾದವು. ದೇವಾಲಯಗಳಿಗೆ ಹೋಗುವದನ್ದೇನು ನಿಲ್ಲಿಸಿದ್ದೇನೆ. ದೇವಾಲಯಗಳಲ್ಲಿ ಏನು ಇಲ್ಲ. ಯಾವುದೇ ಮಹತ್ವ ಉಳಿದುಕೊಂಡಿಲ್ಲ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button