ಪ್ರಮುಖ ಸುದ್ದಿ
ಆಗಷ್ಟ ಬಳಿಕವೇ ಶಾಲಾ ಆರಂಭಿಸುವ ಸುಳಿವು ನೀಡಿದ ಕೇಂದ್ರ ಸಚಿವ ಪೋಖ್ರಿಯಾಲ್
ನವದೆಹಲಿಃ ಇನ್ನೇನು ಜುಲೈ ತಿಂಗಳಲ್ಲಿ ಶಾಲೆಗಳನ್ನು ತೆರೆಯುವ ಉತ್ಸಾಹದಲ್ಲಿದ್ದ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ್ ತಣ್ಣೀರೆರಚಿದ್ದಾರೆ.
ಜುಲೈ ನಲ್ಲಿ ಅಲ್ಲ ಆಗಷ್ಟನಲ್ಲೂ ಶಾಲೆ ಆರಂಭವಾಗವುದು ಅನುಮಾನ ಎಂಬ ಸುಳಿವನ್ನು ಅವರು ನೀಡಿದ್ದಾರೆ.
ಬಿಬಿಸಿ ಹಿಂದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಆ.15 ರ ಬಳಿಕ ಶಾಲೆ ಆರಂಭಿಸುವ ಸಾಧ್ಯತೆ ಇದೆ ಎಂದುಅವರು ತಿಳಿಸಿದ್ದಾರೆ.ಯಾವುದಕ್ಕೂ ಆಗಷ್ಟ ಬಳಿಕದ ಪರಿಸ್ಥಿತಿ ನೋಡಿ ಶಾಲಾ ಕಾಲೇಜು ಆರಂಭಿಸುತ್ತೇವೆ ಎಂದಿದ್ದಾರೆ.