ಪ್ರಮುಖ ಸುದ್ದಿ

HDK ನೀಡಿದ್ದ ಭರವಸೆ BSY ಈಡೇರಿಸುತ್ತಿದ್ದಾರೆ-ನಾರಾಯಣಗೌಡ

ಬಿಎಸ್ ವೈ 212 ಕೋಟಿ ಅನುದಾನ ನೀಡಿದ್ದಾರೆ-ಅನರ್ಹ ಶಾಸಕ ನಾರಾಯಣಗೌಡ

ಬೆಂಗಳೂರಃ ಶಾಸಕ ಸ್ಥಾನಕ್ಕೆ ನಾವೆಲ್ಲ ರಾಜೀನಾಮೆ ಕೊಟ್ಟಿದ್ದರೂ ಹಿಂದಿನ ಸ್ಪೀಕರ್ ಅವರು ಶಾಸಕ ಸ್ಥಾನದಿಂದ ನಮ್ಮನ್ನೆಲ್ಲ ಅನರ್ಹಗೊಳಿಸಿದ್ದಾರೆ. ಸುಪ್ರೀಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶಾಸಕ ಹುದ್ದೆ ಖಾಲಿ ಇಲ್ಲ ಎಂದು ಈ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಹಿಂದಿನ ಸಿಎಂ ಕುಮಾರಸ್ವಾಮಿ ಅವರು ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡದ ಕಾರಣ ನಾವೆಲ್ಲ ರಾಜೀನಾಮೆ ನೀಡಿದ್ದೇವೆ. ಯಡಿಯೂರಪ್ಪನವರು 212 ಕೋಟಿ ಅನುದಾನ ನೀಡಿದ್ದಾರೆ. ಕುಮಾರಸ್ವಾಮಿಯವರು ಹಿಂದೆ ಯಾವುದೇ ಅನುದಾನ ನೀಡಲಿಲ್ಲ. ಆ ಕಾರಣಕ್ಕೆ ರಾಜೀನಾಮೆ ನೀಡಬೇಕಾಯಿತು.

ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button