ಪ್ರಮುಖ ಸುದ್ದಿ

ಚನ್ನಮ್ಮ‌ ವೃತ್ತಕ್ಕೆ ಜಾಗ‌ ದಾನ-ಸೌಹಾರ್ಧತೆ ಮೆರೆದ ಶೌಕತ್ ಅಲಿ

ಚನ್ನಮ್ಮ ವೃತ್ತಕ್ಕೆ ಮುಸ್ಲಿಮರೊಬ್ಬರ ಬೆಲೆ ಬಾಳುವ ಜಮೀನು!

ಸೌಹಾರ್ದತೆ ಮೆರೆದ ಆಲಮೇಲದ ಶೌಕತ್ ಅಲಿ
ಸಿಂದಗಿಯ ಚನ್ನಮ್ಮ ವೃತ್ತಕ್ಕೆ ಶೌಕತ್ ಅಲಿ ಸುಂಬಡ್ ಎನ್ನುವವರು ತಮ್ಮ ಜಮೀನು ನೀಡಿ, ಈ ನೆಲದ ನಿಜ ಸೌಹಾರ್ದತೆ ಮೆರೆದಿದ್ದಾರೆ.

ಲಿಂಗಾಯತರಲ್ಲಿನ ಒಳ ಪಂಗಡಗಳ ಬೇಗುದಿಗೂ ಇವರು ಇದರಿಂದ ಉತ್ತರವಾಗಿ ನಿಂತಿದ್ದಾರೆ. ಇವರು ಆಲಮೇಲದವರು ಎನ್ನುವುದು ವಿಶೇಷ. ಕೋಟಿ ಬೆಲೆಯ ಒಂದು ಗುಂಟೆಯಷ್ಟು ಜಾಗವನ್ನು ನೀಡಿದ್ದು, ಅಲ್ಲಿ ‘ಕೋಟೆ’ ಮಾದರಿಯ ಕಟ್ಟಡದ ಜತೆ ವೀರ ಮಾತೆ ಕಿತ್ತೂರು ಚನ್ನಮ್ಮಳ ಮೂರ್ತಿ ರಾರಾಜಿಸಲಿದೆ.

ಸೋಮವಾರ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ವೃತ್ತಕ್ಕೆ ಚಾಲನೆ ನೀಡಿ, ಆತ್ಮೀಯವಾಗಿ ಸುಂಬಡ ಅವರನ್ನು ಸನ್ಮಾನಿಸಲಾಯಿತು. ಬಸವಜಯ ಶ್ರೀಗಳು ಮಾತನಾಡಿ, ಚನ್ನಮ್ಮ ರಾಣಿಯಾಗಿದ್ದಾಗ ಮುಸ್ಲಿಮರ ಪ್ರಾರ್ಥನೆಗೆ ತಮ್ಮ ಸಂಪತ್ತು ನೀಡಿ ಮಸೀದಿ ಕಟ್ಟಿಸಿದ್ದರು. ಆ ಋಣವನ್ನು ಈ ರೀತಿ ಶೌಕತ್‌ ಅಲಿಯವರು ತೀರಿಸಿದ್ದಾರೆ.

ಲಿಂಗಾಯತರೊಂದಿಗೆ ಮುಸ್ಲಿಮರು ಎಲ್ಲ ಕಡೆ ಅನ್ಯೋನ್ಯವಾಗಿರಯವುದಕ್ಕೆ ಇದು ದೊಡ್ಡ ಸಾಕ್ಷಿ. ಮಕ್ಕಳು, ಹೆಂಡರಿಗೆ ಆಸ್ತಿ ಮಾಡಿಟ್ಟರೆ ಹೆಸರು ಉಳಿಯಲ್ಲ. ಹೀಗೆ ಸಮಾಜಕ್ಕೆ ಸ್ಪಂದಿಸಿದರೆ ಅಜರಾಮರರಾಗುತ್ತೀರಿ ಎನ್ನುವ ತೂಕದ ಮಾತುಗಳನ್ನು ಆಡಿದರು.

ನಂತರ ಮಾತನಾಡಿದ ಶೌಕತ್ ಅಲಿ, ಎಲ್ಲರೂ ಕೂಡಿ ಬಾಳುವುದೇ ನಿಜವಾದ ಧರ್ಮ. ಅದೇ ಆಶಯಕ್ಕೆ ಜಮೀನು ನೀಡಿರುವೆ. ಹಿಂದೂ ಮುಸ್ಲಿಮರು ಪ್ರೇಮದಿಂದ ಇರಬೇಕು ಎಂದು ಭಾವುಕವಾಗಿ ಹೇಳಿದರು.

ಶಾಸಕ ಎಂ.ಸಿ. ಮನಗೂಳಿಯವರ ಪುತ್ರ ಅಶೋಕ ಮನಗೂಳಿ, ಸಿದ್ದು ಪಾಟೀಲ್, ಪತ್ರಕರ್ತ ಶಿವಕುಮಾರ್ ಉಪ್ಪಿನ, ಜಗದೀಶ್ ಕಲಬುರಗಿ, ಸಂತೋಷ ಡಂಬಳ, ಬಸವ ದಳದ ಗುರು ಬಸರಕೋಡ, ಅಶೋಕ ಅಲ್ಲಾಪುರ, ಗುಂಡು ಕರೂತಿ, ರಫೀಕ್, ದಾನಪ್ಪಗೌಡ ಚನಗೊಂಡ, ಪ್ರಶಾಂತ್ ಬಿರಾರಾರ್, ರಮೇಶ್ ಬಡಾನೂರ್, ರಾಮು ಅನೇಕರಿದ್ದರು.

ಬರಹ; ಶಿವಕುಮಾರ್ ಉಪ್ಪಿನ

Related Articles

Leave a Reply

Your email address will not be published. Required fields are marked *

Back to top button