ಪ್ರಮುಖ ಸುದ್ದಿ
ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮನ ಬಂಧನ!
ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮನ ಬಂಧನ!
ಕೊಪ್ಪಳ: ಸೆಪ್ಟೆಂಬರ್ 21ರಂದು ಕುಷ್ಟಗಿ ಪಟ್ಟಣದಲ್ಲಿನ ಮಲ್ಲನಗೌಡ ಎಂಬುವರ ಮನೆ ಕಳ್ಳತನಾವಾಗಿತ್ತು. 30 ಗ್ರಾಂ ಚಿನ್ನಾಭರಣ ಸೇರಿ ನಗದು ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಕಳೆದ ಒಂದು ವಾತದಿಂದ ಕಳ್ಳತನ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಪೊಲೀಸರಿಗೆ ಶಾಕ್ ಕಾದಿತ್ತು.
ಯಾಕೆಂದರೆ , ಅಲ್ಲಿ ಕಳ್ಳತನದ ಆರೋಪಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದವನು ಮನೆ ಕಳ್ಳತನವಾಗಿದ್ದ ಮಲ್ಲನಗೌಡ ಅವರ ಸಹೋದರನಾಗಿದ್ದನು. ಆರೋಪಿ ಸಂಗಮೇಶ ಹಾಗೂ ಅಳಿಯ ಕಳಕೇಶ ಇಬ್ಬರನ್ನೂ ಬಂಧಿಸಿದ್ದು 30 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳಿಬ್ಬರೂ ತಪ್ಪು ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ. ಅಣ್ಣನ ಮನೆಗೇ ಅಳಿಯನ ಜತೆ ಸೇರಿ ಕನ್ನ ಹಾಕಿರುವ ಸಂಗಮೇಶನ ಕಥೆ ಈಗ ಕೊಪ್ಪಳ ಜಿಲ್ಲೆಯಲ್ಲೆಲ್ಲ ಕೇಳಿಬರುತ್ತಿದೆ.