ಪ್ರಮುಖ ಸುದ್ದಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ‘ಚಾಯ್ ವಾಲಿ’!
ನವದೆಹಲಿ : ಚಾಯ್ ವಾಲಾ ನರೇಂದ್ರ ಮೋದಿ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಢೀರನೇ ಹಳ್ಳಿಯೊಂದರ ಪುಟ್ಟ ಅಂಗಡಿಗೆ ಭೇಟಿ ನೀಡಿ ಚಹಾ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಬಿಡುವಿಲ್ಲದ ಕೆಲಸದ ನಡುವೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದಲ್ಲಿನ ದಿಘಾದ ದತ್ತಾಪುರ ಗ್ರಾಮದ ಚಹಾ ಅಂಗಡಿ ಬಳಿ ಏಕಾಏಕಿ ವಾಹನ ನಿಲ್ಲಿಸಿದ ಮಮತಾ ಬ್ಯಾನರ್ಜಿ ಖುದ್ದಾಗಿ ಚಹಾ ಮಾಡಿ ಸಹೋದ್ಯೋಗಿಗಳಿಗೂ ಹಂಚಿ ತಾವೂ ಸೇವಿಸಿದ್ದಾರೆ. ಆ ಮೂಲಕ ಅಂಗಡಿ ಮಾಲೀಕ ಸೇರಿದಂತೆ ಸಹೋದ್ಯೋಗಿಗಳು ಹಾಗೂ ರಾಜಕೀಯ ವಲಯಕ್ಕೆ ಶಾಕ್ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಚಹಾ ಮಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.