ಪ್ರತಿದಿನವೂ ಚಿಕನ್ ತಿನ್ನಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…
ಚಿಕನ್ ಬಹುತೇಕರಿಗೆ ನೆಚ್ಚಿನ ಆಹಾರ. ರುಚಿ ಮಾತ್ರವಲ್ಲದೆ, ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಹ ದೊರೆಯುತ್ತವೆ. ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳನ್ನು ಚಿಕನ್ ಒದಗಿಸುತ್ತದೆ.
ಚಿಕನ್ನಲ್ಲಿ ಹಲವು ವೆರೈಟಿಗಳನ್ನು ಮಾಡಬಹುದು. ಚಿಕನ್ ಫ್ರೈ, ಚಿಕನ್ ಬಿರಿಯಾನಿ, ಚಿಕನ್ ಕರಿ ಹಾಗೂ ಚಿಕನ್ 65 ಹೀಗೆ ಹಲವು ಬಗೆಯಲ್ಲಿ ಚಿಕನ್ ಖಾದ್ಯವನ್ನು ಮಾಡಿ ತಿನ್ನಬಹುದು. ಕೆಲವರು ಚಿಕನ್ಗೆ ಯಾವ ರೀತಿ ಅಡಿಕ್ಟ್ ಆಗಿರುತ್ತಾರೆ ಅಂದರೆ, ಒಂದು ದಿನವೂ ಚಿಕನ್ ತಿನ್ನದೇ ಇರುವುದಿಲ್ಲ. ಆದರೆ, ದಿನನಿತ್ಯ ಚಿಕನ್ ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹೆಚ್ಚು ಚಿಕನ್ ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮೇಲಾಗಿ ಹೃದ್ರೋಗಗಳೂ ಬರುತ್ತವೆ. ನಮ್ಮ ದೇಹಕ್ಕೆ ದಿನಕ್ಕೆ ಕೇವಲ 35 ರಷ್ಟು ಪ್ರೊಟೀನ್‌ಗಳು ಬೇಕಾಗುತ್ತದೆ. ಅದಕ್ಕಿಂತ ಹೆಚ್ಚು ಪ್ರೊಟೀನ್ ಸೇವಿಸಿದರೆ ನಮ್ಮ ದೇಹವು ಅದನ್ನು ಕೊಬ್ಬಿನಂತೆ ಸಂಗ್ರಹಿಸುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ.
ತೂಕ ಹೆಚ್ಚಾದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಬಾದಿಸುತ್ತವೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ ಕೆಂಪು ಮಾಂಸದ ರೀತಿಯಲ್ಲಿಯೇ ಕೋಳಿ LDL ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಇದು ನಿಮ್ಮ ಹೃದಯದ ಮೇಲೆ ನೇರ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಕೋಳಿಮಾಂಸವನ್ನು ಸೇವಿಸುತ್ತಿದ್ದರೆ ನಿಮ್ಮ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಬಹುದು.