ಬಿಜೆಪಿ ಲೀಡರ್ ಅನಂತಕುಮಾರ ಇನ್ನಿಲ್ಲ..!
ಬಿಜೆಪಿ ಹಿರಿಯ ನಾಯಕ ಅನಂತಕುಮಾರ ವಿಧಿವಶ
ಬೆಂಗಳೂರಃ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತಕುಮಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ವಿಧಿವಶವಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಆಸ್ಪತ್ರೆವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿಯೇ ಇಂದು ಸೋಮವಾರ ಬೆಳಗಿನ ಜಾವ 3:00 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾರೆ.
ಈ ಮೊದಲು ಕ್ಯಾನ್ಸರ್ ಸಂಬಂಧಿ ಖಾಯಿಲೆಯಿಂದ ನರಳುತಿದ್ದರು. ಈ ಕಾರಣಕ್ಕೆ ಇತ್ತೀಚೆಗೆ ವಿದೇಶದಿಂದ ಚಿಕತ್ಸೆ ಪಡೆದುಕೊಂಡು ಬಂದಿದ್ದರು ಎನ್ನಲಾಗಿದೆ.
ಆದಾಗ್ಯು ಗುಣಮುಖರಾಗದ ಹಿನ್ನೆಲೆ ಮತ್ತೆ ನಗರದ ಶಂಕರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಚಿಕಿತ್ಸೆಗೆ ಸ್ಪಂಧಿಸದೆ ವಿಧಿವಶರಾಗಿದ್ದಾರೆ.
ಶಾಲಾ ಕಾಲೇಜು ರಜೆ ಘೋಷಣೆ
ಬಿಜೆಪಿ ಹಿರಿಯನಾಯಕ ಅನಂತಕುಮಾರ ವಿಧಿವಶ ಹಿನ್ನೆಲೆ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಸಿಎಂ ಕುಮಾರಸ್ವಾಮಿ ಅನಂತಕುಮಾರ ಅವರ ಜೊತೆ ನನ್ನ ವಯಕ್ತಿಕ ಸ್ನೇಹ ಚನ್ನಾಗಿತ್ತು. ಅದು ರಾಜಕೀಯೇತರ ಸ್ನೇಹ ಬಾಂಧವ್ಯ ಹೊಂದಿದ್ದರು. ಅವರೊಬ್ಬ ಉತ್ತಮ ರಾಜಕಾರಣಿ, ರಾಜಕೀಯ ಬೇರೆ ವಯಕ್ತಿಕ ಸಂಬಂಧಗಳು ಬೇರೆ ಎಂದು ಅವರ ಒಡನಾಟವನ್ನು ನೆನೆದರು.
ಅವರ ನಿಧನದ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದೇನೆ ಎಂದು ತಿಳಿಸಿದರು.