ಬೆಂಕಿಹಚ್ಚುವ ಕೆಲಸ RSSಗೆ ರಕ್ತಗತವಾಗಿ ಬಂದಿದೆ -ಸಿಎಂ ಸಿದ್ಧರಾಮಯ್ಯ
ಮುಂದಿನ ಸರ್ಕಾರ ನಮ್ಮದೇ ನೋ ಡೌಟ್ -ಸಿಎಂ
ಚಿತ್ರದುರ್ಗ: ‘ಬೆಂಕಿ ಹಚ್ಚುವ ಕೆಲಸ RSSಗೆ ರಕ್ತಗತವಾಗಿ ಬಂದಿದೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ‘ಸಿಎಂ ಸಿದ್ಧರಾಮಯ್ಯ ಅಲ್ಲ, ಅವರು ಬೆಂಕಿ ಸಿದ್ಧರಾಮಯ್ಯ ‘ ಅಂದಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಗೆ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಬಿಜೆಪಿ, ಆರ್ ಎಸ್ ಎಸ್ ವಿರುದ್ಧ ಕಿಡಿಕಾರಿದ ಸಿಎಂ , ಅವರದ್ದು ಬೆಂಕಿ ಹಚ್ಚುವುದೇ ಕೆಲಸ. ನಮ್ಮದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ. ನಮ್ಮ ಸಂಸ್ಕೃತಿ ಶಾಂತಿ, ಸಾಮರಸ್ಯ ಮೂಡಿಸುವ ಸಂಸ್ಕೃತಿ ಎಂದರು.
ಇದೇ ವೇಳೆ ಮುಂದಿನ ವರ್ಷವೂ ನಾವೇ ದಸರಾ ಉದ್ಘಾಟಿಸುತ್ತೇವೆಂದರು. ನನ್ನ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಮತ್ತೆ ಗೆದ್ದು ಬರುತ್ತೇವೆ. ಬಳಿಕ ಶಾಸಕಾಂಗದ ಮೂಲಕ ಮುಂದಿನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮತ್ತೆ ನಾನೇ ಮುಖ್ಯಮಂತ್ರಿ ಆಗುತ್ತೇನೆಂಬ ಸಂದೇಶ ನೀಡಿದರು.