ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ಸಂಸದ ಡಾ.ಜಾಧವ
ಗಾಯಾಳುಗಳಿಗೆ ಚಿಕಿತ್ಸೆ ನೀಡಿದ MP ಡಾ.ಜಾಧವ್
ಯಾದಗಿರಿ: ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಸ್ವಂತ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ದಾಖಲಿಸಿ ಅಲ್ಲದೇ ತಾವೇ ಚಿಕಿತ್ಸೆ ನೀಡುವ ಮೂಲಕ ಸಂಸದ ಉಮೇಶ್ ಜಾಧವ್ ಮಾನವೀಯತೆ ಮೆರೆದಿದ್ದಾರೆ.
ನಗರದ ಕೆಎಸ್ಆರ್‌ಟಿಸಿ ಕಾರ್ಯಾಗಾರ ಬಳಿ ನಿನ್ನೆ ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಅಪಘಾತ ಜರುಗಿತ್ತು. ಈ ಘಟನೆಯಲ್ಲಿ ಗುರಮಿಠಕಲ್ ತಾಲೂಕಿನ ಕೆ.ಅರಕೇರಿ ಗ್ರಾಮದ ರಾಠೋಡ ಹಾಗೂ ನರೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು.
ಆದೇ ಮಾರ್ಗದಲ್ಲಿ ರೈಲು ಕಾರ್ಯಾಗಾರ ವೀಕ್ಷಿಸಿ ವಾಪಸ್ ಬರುತ್ತಿದ್ದ ಸಂಸದ ಉಮೇಶ್ ಜಾಧವ್, ಘಟನೆ ವಿಷಯ ತಿಳಿದು ತಕ್ಷಣ ಸಹಾಯಕ್ಕೆ ಬಂದಿದ್ದಾರೆ.
ಅಂಬ್ಯುಲೆನ್ಸ್ ಬರುವುದು ತಡವಾಗಲಿದೆ ಎಂಬುದನ್ನು ಅರಿತ ಅವರು, ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ತಮ್ಮ ಕಾರಿನಲ್ಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಅಲ್ಲದೇ ಜಾಧವ್ ಅವರೇ ಸ್ವತಃ ವೈದ್ಯರಾಗಿರುವುದರಿಂದ ತಾವೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಂತರ ಆಸ್ಪತ್ರೆಗೆ ಬಂದ ಯಾದಗಿರಿ ನಗರ ಟ್ರಾಫಿಕ್ ಪೋಲೀಸರು ಗಾಯಾಳುಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.