ಮಲಗೋ ಮುನ್ನ ಈ ಪಾನಿಯಗಳನ್ನ ಸೇವಿಸಿ, ಹೊಟ್ಟೆ ಬೊಜ್ಜು ಕರಗಿಸೋದು ಸುಲಭ!

ಬೊಜ್ಜು ಎಂದರೆ ಯಾರಿಗಾದರೂ ಅಸಹ್ಯ ಮೂಡಿಸದೆ ಇರದು. ಯಾರೂ ಬೊಜ್ಜು ದೇಹ ಬೇಕೆಂದು ಕೇಳಲ್ಲ, ಕೆಲವರಿಗೆ ಇದು ಅನುವಂಶೀಯವಾಗಿ ಬಂದರೆ, ಉಳಿದವರಿಗೆ ಜೀವನ ಶೈಲಿಯಿಂದ ದೇಹದಲ್ಲಿ ಬೊಜ್ಜು ಆವರಿಸಿಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇದಕ್ಕೆ ಕಠಿಣ ಶ್ರಮ ಬೇಕಾಗುವುದು. ಆಹಾರ ಪಥ್ಯದೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಆಗ ಖಂಡಿತವಾಗಿಯೂ ಹೊಟ್ಟೆಯ ಬೊಜ್ಜು ಕಡಿಮೆ ಮಾಡಬಹುದು. ಇದು ಖಂಡಿತವಾಗಿಯೂ ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎನ್ನುವುದಲ್ಲಿ ಎರಡು ಮಾತಿಲ್ಲ. ನೀವು ಆಹಾರ ಕ್ರಮದಲ್ಲಿ ಐದು ಆಹಾರಗಳನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಹೊಟ್ಟೆಯ ಬೊಜ್ಜು ಕರಗಿಸುವುದು.ತೂಕ ಇಳಿಕೆಗಾಗಿ ಮುಂಜಾನೆ ಶ್ರಮ ಪಡುವ ಬದಲು ರಾತ್ರಿ ಹೊತ್ತು ಕೆಲವು ಪಾನೀಯಗಳನ್ನು ಕುಡಿಯುವ ಮೂಲಕ ದೇಹದ ತೂಕ ಇಳಿಸಿಕೊಳ್ಳಬಹುದು.
ನೀರು: ರಾತ್ರಿ ನೀರು ಕುಡಿಯುವುದರಿಂದ ದೇಹದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ರಾತ್ರಿಯಿಡೀ ದೇಹವನ್ನು ತೇವಾಂಶದಿಂದ ಇಡುತ್ತದೆ. ರಾತ್ರಿಯಲ್ಲಿ ಹಸಿವು ಕಡಿಮೆಯಾಗುತ್ತದೆ. ಇದು ನಿರ್ವಿಶೀಕರಣಕ್ಕೂ ಉತ್ತಮವಾಗಿದೆ. ಡಿಟಾಕ್ಸ್ ಪ್ರಕ್ರಿಯೆಯಲ್ಲಿ, ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲಾಗುತ್ತದೆ ಮತ್ತು ದೇಹವು ಹಗುರವಾಗುತ್ತದೆ. ನಿಂಬೆ ನೀರುವ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರ ಹೋಗುತ್ತವೆ. ದೇಹವನ್ನು ತೇವಾಂಶದಿಂದ ಇಡುತ್ತದೆ. ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಿಂಬೆ ನೀರು ಉತ್ತಮ ಪಾನೀಯವಾಗಿದೆ. ಸೋಂಪು ನೀರು: ಸೋಂಪು ನೀರನ್ನು ಮುಂಜಾನೆ ಕುಡಿಯುವುದು ಉತ್ತಮ. ರಾತ್ರಿಯಿಡೀ ಸೋಂಪು ಕಾಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ಕುಡಿಯುವುದರಿಂದ ಚಯಾಪಚಯವು ವೇಗಗೊಳ್ಳುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಗ್ರೀನ್ ಟೀ: ಜೀ ನ್ಯೂಸ್ ವರದಿ ಪ್ರಕಾರ, ತೂಕ ನಷ್ಟಕ್ಕೆ ಗ್ರೀನ್ ಟೀ ಉತ್ತಮ ಪಾನೀಯವಾಗಿದೆ. ಹೆಚ್ಚು ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಕೆಟೋಚಿನ್ಗಳ ಉಪಸ್ಥಿತಿಯಿಂದಾಗಿ ಚಯಾಪಚಯವು ವೇಗವಾಗಿ ಹೆಚ್ಚಾಗುತ್ತದೆ. ಕೊಬ್ಬು ಕೂಡ ಬೇಗ ಕರಗುತ್ತದೆ. ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.