ಪ್ರಮುಖ ಸುದ್ದಿ

ಶೀಘ್ರದಲ್ಲಿ ಅಯೋಧ್ಯಾ ತೀರ್ಪು ಪ್ರಕಟಃ ಮಾಧ್ಯಮದ ಮೇಲೂ ನಿರ್ಬಂಧ ಸಾಧ್ಯತೆ

ವಿವಿ ಡೆಸ್ಕ್ ಃ ಉತ್ತರ ಪ್ರದೇಶದ ಅಯೋಧ್ಯಾದಲ್ಲಿನ ರಾಮ ಮಂದಿರ-ಬಾಬ್ರಿಮಸೀದಿ ವಿವಾದಕ್ಕೆ ಸಂಬ0ಧಿಸಿದ0ತೆ ಈಗಾಗಲೇ ಸುಧೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ನವೆಂಬರ್ ೧೭ ರೊಳಗಾಗಿ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದ್ದು, ನವೆಂಬರ್ ೧೭ ರಂದೇ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತರಾಗಲಿದ್ದು, ಅದಕ್ಕೂ ಮೊದಲೇ ಈ ಮಹತ್ವದ ತೀರ್ಪು ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.

ಅಂತಿಮ ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಸಮುದಾಯಗಳು ಸಂಘಟನೆಗಳ ನಡುವೆ ಘರ್ಷಣೆಗಳು ಉಂಟಗದAತೆ ಬಿಗಿಬಂದೋಬಸ್ತ್ ತಯಾರಿ ನಡೆಸಲಾಗುತ್ತಿದೆ.

ಈ ನಡುವೆ ಅಯೋಧ್ಯ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಉಗ್ರರು ಉತ್ತರ ಪ್ರದೇಶ ಸೇರಿದಂತೆ ಭಾರತದ ಹಲವಾರು ರಾಜ್ಯಗಳೊಳಗೆ ನುಸುಳಿದ್ದಾರೆ ಎಂಬ ಸಂದೇಶ ಗುಪ್ತಚರ ಇಲಾಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ. ಅಯೋಧ್ಯವನ್ನು ಗುರಿಯಾಗಿಸಿಕೊಂಡು ಹಲವಡೆ ಉಗ್ರರು ಹಿಂಸಾತ್ಮಕ ಚಟುವಟಿಕೆ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಸೂಚನೆ ನೀಡಿರುವದರಿಂದ ಎಲ್ಲಡೆ ಕಟ್ಟೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಮಾಧ್ಯಮದ ಮೇಲೂ ನಿರ್ಬಂಧ ಹೇರುವ ಸಾಧ್ಯತೆ ತಳ್ಳಿ ಹಾಖುವಂತಿಲ್ಲ. ಅಂತಿಮ ತೀರ್ಪು ಏನಾದರೂ ಆಗಿರಲಿ ಕಾನೂನು ಪಾಳನೆ ಅಗತ್ಯವಿದ್ದು, ನಾಗರಿಕರು ದೇಶದ ಕಾನೂನು ಪಾಲಿಸಬೇಕೆಂಬ ನಿಯಮದಡಿ ಕೇಂದ್ರ ಸರ್ಕಾರ ಮಾಧ್ಯಮಗಳು ಸಹ ಅಯೋಧ್ಯ ಪ್ರಕರಣದ ಸುದ್ದಿ ಪ್ರಕಟಿಸುವ ಮೂಲಕ ಅಶಾಂತಿಗೆ ಕಾರಣವಾಗದಂತೆ ಎಚ್ಚರಿಕೆವಹಿಸಲು ಮಾಧ್ಯಮದ ಮೇಲೂ ನಿರ್ಬಂಧ ಏರಲಾಗುತ್ತಿದೆ ಎಂದು ಮಝೂಲಗಳು ತಿಳಿಸಿವೆ.

ಇದೆಲ್ಲರ ಮಧ್ಯೆ ಉತ್ತರ ಪ್ರದೇಶದ ಡಿಜಿಪಿ ಓಪಿ ಸಿಂಗ್ ಅವರು, ಉಗ್ರರು ನುಸುಳಿದ್ದಾರೆ ಎಚ್ಚರಿಕೆ ಸಂದೇಶ ಬಂದಿದೆ ಎಂಬುದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ ಹೇರುವ ಸಾಧ್ಯತೆಯು ತಳ್ಳಿ ಹಾಕುವಂತಿಲ್ಲ. ಅಯೋದ್ಯದ ಅಂತಿಮ ತೀರ್ಪು ಏಏಣ ಆಗಿರಲಿ ದೇಶದಲ್ಲಿ ಶಾಂತಿ ಹದಗೆಡಬಾರದು ಎಂಬ ನಿರ್ಧಾರಕ್ಕೆ ಬಂದ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button