ವಿನಯ ವಿಶೇಷ

ಚಿತಾಪುರಃ ವಿಠಲ್‌ ಹೇರೂರ ಪ್ರತಿಮೆ ಸ್ಥಾಪನೆ

ಹೊನಗುಂಟಿಯಲ್ಲಿ ವಿಠ್ಠಲ್ ಹೇರೂರು ಪ್ರತಿಮೆ ಸ್ಥಾಪನೆ

ವಿಠ್ಠಲ್ ಹೇರೂರು ಹೋರಾಟ ಸ್ಮರಣಾರ್ಹ, ಖರ್ಗೆ ನಮ್ಮೆಲ್ಲರ ಉತೃಷ್ಠ ನಾಯಕರು- ಕಮಕನೂರು.

ಚಿತಾಪುರಃ ಕಬ್ಬಲಿಗ ಕೋಲಿ ಸಮಾಜಕ್ಕೆ ದಿವಂಗತ ವಿಠ್ಠಲ್ ಹೇರೂರು ಅವರ ಕೊಡುಗೆ ಅಪಾರವಾದುದು. 12 ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ಕಬ್ಬಲಿಗ ಕೋಲಿ ಸಮಾಜವನ್ನು ಗುರುತಿಸಿದರೆ, 21 ನೇ ಶತಮಾನದಲ್ಲಿ ಹೇರೂರು ಅವರು ಸಮಾಜಕ್ಕಾಗಿ‌ ಹೋರಾಟ ಮಾಡಿದರು ಎಂದು ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಅಭಿಪ್ರಾಯಪಟ್ಟರು.

ಚಿತ್ತಾಪುರ ಮತಕ್ಷೇತ್ರದ ಹೊನಗುಂಟಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ವಿಠ್ಠಲ್ ಹೇರೂರ್ ಅವರ ಪತ್ರಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

ಕೋಲಿ ಸಮಾಜ ಒಗ್ಗಟ್ಟಾಗುವುದರ ಜೊತೆಗೆ ಇತರೆ ಸಮುದಾಯದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸೌಹಾರ್ದಯುತ ಜೀವನ ನಡೆಸಿಕೊಂಡು ಹೋಗಬೇಕು ಎಂದ ಕಮಕನೂರು, ಸಮಾಜದ ಅಭ್ಯುದಯಕ್ಕೆ ಹಿರಿಯ ನಾಯಕರಾದ  ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಿದ್ದಾರೆ ಎಂದರು.

ವೇದಿಕೆಯ ಮೇಲೆ ಶಾಸಕ ಪ್ರಿಯಾಂಕ್ ಖರ್ಗೆ, ಅಲ್ಲಮಪ್ರಭು ಪೀಠದ ಮಲ್ಲಣ್ಣಪ್ಪ ಮುತ್ಯಾ ತೊಣಸನಹಳ್ಳಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ್ ಪಾಟೀಲ್, ಭೀಮಣ್ಣ ಸಾಲಿ‌ ಸೇರಿದಂತೆ ಮತ್ತಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button