ಚರ್ಚ್ ನಿರ್ಮಾಣಕ್ಕೆ ಸಹಕಾರ ದರ್ಶನಾಪುರ ಭರವಸೆ
ಶಹಾಪುರಃ ನಾವು ಕೇವಲ ನಮ್ಮ ಕುಟುಂಬ ಹಾಗೂ ಜಾತಿಗೆ ಸೀಮಿತವಾಗದೆ ಅನ್ಯ ಧರ್ಮಗಳ ಸಮುದಾಯದವರ ಜೊತೆ ಸೌಹಾರ್ಧಯುತವಾಗಿ ಜೀವನ ನಡೆಸುವದರ ಜತೆಯಲ್ಲಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಲಹೆ ನೀಡಿದರು.
ಸಮೀಪದ ಭೀಮರಾಯನ ಗುಡಿಯಲ್ಲಿ ಕ್ರೈಸ್ತ್ ಸಮುದಾಯದ ಭವನದಲ್ಲಿ ಶನಿವಾರ ಶಾಸಕರುÀ ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಕ್ರೈಸ್ತ್ ಸಮುದಾಯದಕ್ಕೆ ಅಗತ್ಯವಿರುವ ಚರ್ಚ್ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳುವೆ ಎಂದು ಭರವಸೆ ನೀಡಿದರು. ಸಮುದಾಯದ ಸಭೆ ಸಮಾರಂಭಗಳಿಗಾಗಿ ಅಗತ್ಯವಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಸಮುದಾಯ ಇಟ್ಟ ಬೇಡಿಕೆಯಂತೆ ಶೀಘ್ರದಲ್ಲಿ ಸಮುದಾಯ ಭವನ ನಿರ್ಮಾಣ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವೆ.
ಸಮುದಾಯದ ಆಶಯದಂತೆ ಬಡವರಿಗೆ ಕೈಲಾದ ನೆರವು ನೀಡುವ ಸಹಕಾರ ನೀಡುವ ಕಾರ್ಯ ಮುಂದುವರೆಯಲಿ. ಯಾರಿಗೆ ಆಗಲಿ ಸಹಾಯ ಸಹಕಾರ ಮಾಡುವಲ್ಲಿ ಫಲಾಫೇಕ್ಷೆಯಿಲ್ಲದೆ ಸಹಾಯ ಮಾಡಬೇಕು. ಪರೋಪಕಾರ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ವಸಂತಕುಮಾರ ಸುರಪುರಕರ್, ಶಿವಕುಮಾರ, ರತ್ನಾಕರ ಶೆಟ್ಟಿ, ರುದ್ರಗೌಡ ಶಾರದಳ್ಳಿ, ಸೇಂಟ್ ಪೀಟರ್ ಚರ್ಚ್ ಫಾದರ್ ಫೆಡ್ರಿಕ್ ಡಿಸೋಜಾ, ಮೆಥೋಡಿಸ್ಟ್ ಚರ್ಚ್ ರೆವ ಸಾಮ್ಯುವೆಲ್, ದಿವ್ಯ ದರ್ಶನ ಚರ್ಚ್ ರೆವ ಮಂಜುನಾಯಕ, ಹಾವೇಸ್ಟ್ ಎಜಿ ಚರ್ಚ್ ರೆವ ಎಬೆನೆಜೆರ್ ಎಸ್, ಜೀಸಸ್, ಬೈಬಲ್ ಮಿಷನ್ ರೆವ ರಾಜೇಂದ್ರ ಪ್ರಸಾದ, ಹೋಲಿ ವೇ ಪ್ರೇಮಯರ್ ಹೌಸ್ ಪಾಸ್ಟರ್ ಬಸವರಾಜ್ ಎಸ್, ರುದ್ರಪ್ಪ ಹುಲಿಮನಿ, ಮಹಾದೇವಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.