ಗೋವು ರಕ್ಷಣೆಯಿಂದ ಮಾನವ ಕುಲ ಸಮೃದ್ಧ
ಹಯ್ಯಾಳ(ಬಿ) ಗ್ರಾಮದಲ್ಲಿ ಬಿಜೆಪಿಯಿಂದ ಗೋವು ಪೂಜೆ
ಯಾದಗಿರಿ, ಶಹಾಪುರಃ ಬಿಜೆಪಿ ರಾಷ್ಟ್ರೀಯ ಘಟಕ ಆದೇಶದಂತೆ ರಾಷ್ಟ್ರವ್ಯಾಪ್ತಿ ಕೈಗೊಂಡ ಗೋವು ಪೂಜೆಯನ್ನು ತಾಲೂಕಿನ ಹಯ್ಯಾಳ(ಬಿ) ಗ್ರಾಮದಲ್ಲಿ ಬಿಜೆಪಿ ರೈತ ಮೋರ್ಚಾ ಗೋ ಮಾತೆಗೆ ಬೆಲ್ಲ ಅಕ್ಕಿ ತಿನ್ನಿಸುವ ಜೊತೆಗೆ ಕಾಯಿ ಹೊಡೆದು ಆರತಿ ಬೆಳಗುವ ಮೂಲಕ ಪೂಜೆ ನೆರವೇರಿಸಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ರೋತ ಮೋರ್ಚಾ ಮುಖಂಡ ಯಲ್ಲಯ್ಯ ನಾಯಕ ಮಾತನಾಡಿ, ಗೋವುಗಳನ್ನು ರಕ್ಷಣೆ ಮಾಡುವದರಿಂದ ಮಾನವ ಸಂಕುಲಕ್ಕೆ ಸಮೃದ್ಧ ದೊರೆಯಲಿದೆ. ಗೋವುಗಳು ಎಲ್ಲಿ ನೆಲಿಸಿರಲಿವೆ ಆ ಪ್ರದೇಶ ಸಮೃದ್ಧವಾಗಿ ಆರೋಗ್ಯಯುತ ವಾತಾವರಣದಿಂದ ಕೂಡಿರಲಿದೆ.
ಹೀಗಾಗಿ ಗ್ರಾಮಗಳಲ್ಲಿ ಹಳೇ ಸಂಪ್ರದಾಯದಂತೆ ಎಲ್ಲಿ ಗೋಮಯ ವಾತಾವರಣ ಕೂಡಿತ್ತು ಆ ಪ್ರದೇಶ ಸರ್ವ ರೀತಿಯಿಂದಲೂ ಸಮೃದ್ಧವಾಗಿತ್ತು ಎಂಬುದನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಗೋವುಗಳನ್ನು ಪ್ರತಿಯೊಬ್ಬರು ಕುಟುಂಬೆರಡು ಗೋವುಗಳನ್ನು ಸಲಹುವ ರಕ್ಷಿಸುವ ಕಾಲ ಸನ್ನಿಹಿತವಾಗಿದೆ. ಗೋವುಗಳಿಂದ ಎಷ್ಟೆಲ್ಲ ಸದುಪಯೋಗವಿದೆ. ಆರ್ಥಿಕವಾಗಿ ಆರೋಗ್ಯಯುತವಾಗಿ ಅಲ್ಲದೆ ಪ್ರತಿ ಬೆಳವಣಿಗೆಗೆ ಗೋವು ಬಹು ಮುಖ್ಯ ಎಂಬದನ್ನು ಭಾರತೀಯರು ಮಾತ್ರವಲ್ಲ ವಿದೇಶದಲ್ಲೂ ಇದನ್ನು ಮನಗಂಡಿರುವ ಕಾರಣ ವಿದೇಶದಲ್ಲಿ ವಿಶೇಷವಾಗಿ ಭಾರತೀಯ ಗೋವುಗಳನ್ನು ಸಲಹುತಿದ್ದಾರೆ ಎಂದರು.
ಗ್ರಾಮದ ಬಿಜೆಪಿ ಮುಖಂಡ ಶಿವಶರಣಪ್ಪ ಸಾಹು ಗೋವಿಗೆ ಪೂಜೆ ಸಲ್ಲಿಸಿದರು. ಬಿಜೆಪಿ ಉಪಾಧ್ಯಕ್ಷ ಹಣಮಂತ್ರಾವ್ ಕುಲಕರ್ಣಿ ಐಕೂರ, ಸಂಗನಗೌಡ ಪಾಟೀಲ್, ಚನ್ನಬಸಯ್ಯ ಸ್ವಾಮಿ, ಶರಬಣ್ಣ ದೇಸಾಯಿ, ಶಂಕ್ರಣ್ಣ ಸಾಹು, ಭೀಮಣ್ಣ ಪೂಜಾರಿ, ಅಶೋಕ ಸಾಹು, ಮಲ್ಲಣಗೌಡ, ನಿಂಗಣ್ಣ ಬೋಳಾರಿ, ದೇವಪ್ಪ ಬಗಲಿ, ಅಮರಯ್ಯ ಸ್ವಾಮಿ, ಮಹಾಂತೇಶ ಬಡಿಗೇರ, ಶಿವಪ್ಪ ಮಡಿವಾಳ ಸೇರಿದಂತೆ ಇತರರಿದ್ದರು.