ಪ್ರಮುಖ ಸುದ್ದಿ
ಸಿಎಂ ಭೇಟಿಯಾದ ಸಚಿವ ಆನಂದಸಿಂಗ್, ಖಾತೆ ಬಗ್ಗೆ ಅಸಮಾಧಾನ
ಸಿಎಂ ಭೇಟಿಯಾದ ಸಚಿವ ಆನಂದಸಿಂಗ್, ಖಾತೆ ಬಗ್ಗೆ ಅಸಮಾಧಾನ
ಬೆಂಗಳೂರಃ ಬೆಳ್ಳಂಬೆಳಗ್ಗೆ ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ ಅವರ ಮನೆಗೆ ಸಚಿವ ಆನಂದ ಸಿಂಗ್ ಭೇಟಿ ನೀಡಿದ್ದು, ಪ್ರವಾಸೋದ್ಯಮ ಖಾತೆ ನೀಡಿರುವದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಖಾತೆ ಹಂಚಿಕೆ ಬೆನ್ನಲ್ಲೆ ಆನಂದ ಸಿಂಗ್ ಅಸಮಾಧಾನ ತೋಡಿಕೊಂಡಿದ್ದಲ್ಲದೆ ಕಾದು ನೋಡಿ ಎನ್ನುವ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ರಾಜೀನಾಮೆ ನೀಡುವ ಸಂದೇಶ ರವಾನಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ಆ ಹಿನ್ನೆಲೆ ಇದೀಗ ಸಿಎಂ ಜೊತೆ ಚರ್ಚೆ ನಡೆಸುತ್ತಿರುವ ಸಚಿವ ಆನಂದ ಸಿಂಗ್ ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.