ಪ್ರಮುಖ ಸುದ್ದಿ
ಪ್ರವಾಹ : ಎರಡು ದಿನದಲ್ಲಿ NDRF, ಸೇನಾ ತುಕಡಿಗಳಿಂದ ನೆರವು
ಪ್ರವಾಹದಲ್ಲಿ ಮೃತರ ಕುಟುಂಬಕ್ಕೆ 5ಲಕ್ಷ, ಪಿಎಸ್ ಐ ಕುಟುಂಬಕ್ಕೆ ಒಟ್ಟು 50ಲಕ್ಷ ಪರಿಹಾರ
ಬೆಳಗಾವಿ : ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5ಲಕ್ಷ ರೂಪಾಯಿ ಪರಿಹಾರ ಹಾಗೂ ಪ್ರವಾಹ ಸಂದರ್ಭದಲ್ಲಿ ವಾಹನ ಸಂಚಾರ ನಿಯಂತ್ರಿಸುವ ಕರ್ತವ್ಯದಲ್ಲಿದ್ದ ಪಿಎಸ್ಐ ವೀರಣ್ಣ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 30ಲಕ್ಷ ರೂಪಾಯಿ, ವಿಪತ್ತು ಪರಿಹಾರ ನಿಧಿಯಿಂದ 20ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ
ಈಗಾಗಲೇ ನೆರೆ ಹಾವಳಿಯಿಂದಾಗ ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ದಿನಗಳಲ್ಲಿ ರಾಷ್ಟ್ರೀಯ ವಿಕೋಪ ಪರಿಹಾರ ಪಡೆ ಹಾಗೂ ಸೇನಾ ತುಕಡಿಗಳು ನೆರವಿಗೆ ಬರಲಿವೆ ಎಂದು ಮಾದ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.