ಪ್ರಮುಖ ಸುದ್ದಿ
ಜ್ಞಾನಸೌಧ, ಡಾ.ಶಿವಕುಮಾರ ಸ್ವಾಮೀಜಿ ಪರೀಕ್ಷಾ ಕೇಂದ್ರ ಉದ್ಘಾಟಿಸಿದ ಸಿಎಂ BSY
ಜ್ಞಾನಸೌಧ, ಡಾ.ಶಿವಕುಮಾರ ಸ್ವಾಮೀಜಿ ಪರೀಕ್ಷಾ ಕೇಂದ್ರ ಉದ್ಘಾಟಿಸಿದ ಸಿಎಂ BSY
ಬೆಂಗಳೂರಃ ಬಿಬಿಎಂಪಿ ಅನುದಾನ ಮತ್ತು ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಜ್ಞಾನಸೌಧ ಹಾಗೂ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿ ಹೆಸರಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಹಾಗೂ ಇ- ಗ್ರಂಥಾಲಯವನ್ನು ಸಿಎಂ ಯಡಿಯೂರಪ್ಪ ಇಂದು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು, ಪ್ರಸ್ತುತ ಶೈಕ್ಷಣಿಕ, ಉಧ್ಯಮ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಸಹಜವಾಗಿದೆ.
ಹೀಗಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಪರೀಕ್ಷಾ ಕೇಂದ್ರ ಮತ್ತು ಇ-ಗ್ರಂಥಾಲಯ ಸಹಕಾರವಾಗಲಿದೆ. ಇವುಗಳ ಸದ್ಭಳಿಕೆ ಅಗತ್ಯವಿದೆ ಎಂದರು.