ಸಿಎಂ ಬಿಎಸ್‍ವೈ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕಂದಕೂರ
ಕಂದಕೂರ ಸಿಡಿಸಿದ ಹೊಸ ಬಾಂಬ್ ಏನು ಗೊತ್ತೆ.?
ಯಾದಗಿರಿಃ ಈ ಹಿಂದೆ ಜಿಲ್ಲೆಯ ಗುರಮಠಕಲ್ ಮತ ಕ್ಷೇತ್ರ ಶಾಸಕ ನಾಗನಗೌಡ ಕಂದಕೂರ ಅವರ ಸುಪತ್ರ ಶರಣಗೌಡ ಕಂದಕೂರ ಆಪರೇಷ್ನ ಕಮಲದ ರಹಸ್ಯ ಮಾತುಕತೆಯನ್ನು ಹೊರಗಡೆ ಎಳೆಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಸೃಷ್ಟಿ ಮಾಡಿದ್ದು ಎಲ್ಲರೂ ಗೊತ್ತಿರುವ ವಿಷಯ.
ಅದೇ ಶರಣಗೌಡ ಕಂದಕೂರ ಇಂದು ಜೆಡಿಎಸ್‍ವತಯಿಂದ ಗುರಮಠಕಲ್ ಪಟ್ಟಣದಲ್ಲಿ ಬಿಜೆಪಿ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಬಿಎಸ್‍ವೈ ಸಿಎಂ ಆಗುತ್ತಿದ್ದಂತೆ ಗುರುಮಠಕಲ್ ಕ್ಷೇತ್ರಕ್ಕೆ ಬರುವ ಅನುದಾನವನ್ನು ಮೊಟಕುಗೊಳಿಸಿರಬಹುದು, ಆದರೆ ನ್ಯಾಯಯುತವಾಗಿ ಅದನ್ನು ಪಡೆಯುವಲ್ಲಿ ನಾವು ಹೋರಾಟ ನಡೆಸುತ್ತೇವೆ ಎಂದು ಅವರು,
ಬಿಎಸ್‍ವೈ ಅವರ ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹಳೆ ಆಡಿಯೋ ಪ್ರಕರಣ ಎಲ್ಲಿಗೆ ಬಂದಿದೆ ಎಂದು ಅವರದೇ ಪಕ್ಷದ ಪ್ರಮುಖ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಅಲ್ಲದೆ ಮತ್ತೇ ಆ ಪ್ರಕರಣವನ್ನು ರಿಓಪನ್ ಮಾಡಿಸುವ ಮೂಲಕ ಸಿಎಂ ಬಿಎಸ್‍ವೈ ಅವರಿಗೊಂದು ಗತಿ ಕಾಣಿಸುತ್ತೇನೆ. ಅವರದ್ದೆ ಪಕ್ಷದ ಪ್ರಮುಖರು ಕಲಮ ಪಕ್ಷದ ಆಡಿಯೋ ರಿಲೀಸ್ ಮಾಡಲು ಬೆಂಬಲಿಸುತ್ತಿದ್ದಾರೆ.
ಕೂಡಲೇ ಬಿಎಸ್‍ವೈ ಎರಡು ದಿನಗಳಲ್ಲಿ ನಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದಿದ್ದರೆ, ಅವರು ಅಧಿಕಾರದಿಂದ ಕೆಳಗಿಳಿಯುವದು ಗ್ಯಾರಂಟಿ. ಬಿಜೆಪಿ ನಾಯಕರೇ ಅವರನ್ನು ಕೆಳಗಿಳಿಸಲು ಖೆಡ್ಡಾ ತೋಡಿದ್ದಾರೆ. ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ಧತೆ ಮಾಡಿಕೊಳ್ಳಲಿ. ಅವರದ್ದೆ ಬಿ ಟೀಮ್‍ನ ನಾಯಕರೊಬ್ಬರು ಸಿಎಂ ಆಗಲು ಸಿದ್ಧತೆಯಲ್ಲಿದ್ದಾರೆ ಎಂದು ತಿಳಿಸುವ ಮೂಲಕ ಹೊಸ ಅಲೆ ಸೃಷ್ಟಿಸಿದ್ದಾರೆ.