ಪ್ರಮುಖ ಸುದ್ದಿ
ಮಳೆಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಿ-ಸಿಎಂ ಯಡಿಯೂರಪ್ಪ
ಬೆಂಗಳೂರಃ ರಾಜ್ಯದಲ್ಲಿ ವರುಣನ ಆರ್ಭಟ ಜಾಸ್ತಿಯಾಗಿದ್ದು, ಎಲ್ಲೆಡೆ ಹಳ್ಳ ಕೊಳ್ಳ ಸೇರಿದಂತೆ ನದಿಗಳು ತುಂಬಿ ಹರಿಯುತ್ತಿವೆ. ಮಹಾ ಮಳೆಯಿಂದ ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಮಳೆಗೆ ಜನರ ಸಂಕಷ್ಟಕ್ಕೀಡಾಗದಂತೆ ಎಚ್ಚರಿಕೆವಹಿಸಿ, ಆಯಾ ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಕುರಿತು ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯಬೇಕು. ಮಾಹಿತಿ ಅನುಸಾರ ಜನರಿಗೆ ಅನಕೂಲ ಕಲ್ಪಿಸಬೇಕೆಂದು ಅವರು ಸೂಚಿಸದ್ದಾರೆ.