ಚಿರತೆಯನ್ನು ಕಲ್ಲುದೊಣ್ಣೆಗಳಿಂದ ಹೊಡೆದು ಕೊಂದೆ ಬಿಟ್ಟರು.!
ಚಿರತೆಯನ್ನು ಕಲ್ಲುದೊಣ್ಣೆಗಳಿಂದ ಹೊಡೆದು ಕೊಂದರು.!
ಚಿತ್ರದುರ್ಗಃ ನಾಡಿಗೆ ಬಂದ ಕಾಡು ಪ್ರಾಣಿಯೊಂದನ್ನು ಜನ ಕಲ್ಲು ದೊಣ್ಣೆಯಿಂದ ಹೊಡೆದು ಕೊಂದೆ ಬಿಟ್ರು ಪಾಪ.
ತಾಲೂಕಿನ ಕುರುಬರಹಳ್ಳಿಗೆ ಲಗ್ಗೆ ಇಟ್ಟ ಚಿರತೆ ಬುಧವಾರ ಬೆಳಗ್ಗೆ ಇಬ್ಬರ ಮೇಲೆ ದಾಳಿ ಮಾಡಿತೆನ್ನಲಾಗಿದೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೂ ಜನರು ತಿಳಿಸಿದ್ದರು ಎನ್ನಲಾಗಿದೆ. ಚಿರತೆಯನ್ನು ವಾಪಾಸ್ ಕಾಡಿಗೆ ಕಳುಹಿಸುವ ಕಾರ್ಯಾಚರಣೆ ಯಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಎದುರೇ ಜನಸಮೂಹ ಚಿರತೆಯನ್ನು ಕಲ್ಲು ದೊಣ್ಣೆಗಳಿಂದ ಹೊಡೆದಿದ್ದಾರೆ.
ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಟ್ಟರೂ, ರೊಚ್ಚಿಗೆದ್ದ ಜನರಿಂದ ಚಿರತೆಯನ್ನು ರಕ್ಷಿಸುವಲ್ಲಿ ಅಸಹಾಯಕರಾಗಿದ್ದರು ಎನ್ನಲಾಗಿದೆ.
ಆಹಾರಕ್ಕಾಗಿಯೋ ನೀರಿಗಾಗಿಯೋ ನಾಡಿನತ್ತ ಬಂದ ಚಿರತೆಯನ್ನು ಜನ ಮಾನವೀಯತೆ ಮರೆತು ಹೊಡೆದು ಸಾಯಿಸಿದ್ದಾರೆ.
ಮೂಕ ಪ್ರಾಣಿಯನ್ನು ಅರಣ್ಯ ಸಿಬ್ಬಂದಿ ಮೂಲಕ ಕಾಡಿಗೆ ಅಟ್ಟುವ ಕೆಲಸ ಮಾಡಬೇಕಿತ್ತು. ಆದರೆ ಇಲ್ಲಿನ ಜನ ಕೃರ ವರ್ತನೆ ಮೂಲಕ ಪಾಪ ಚಿರತೆಯನ್ನು ಹೊಡೆದು ಕೊಂದಿದ್ದಾರೆ.
ಆಹಾರ ಅರಸಿ ನಾಡಿಗೆ ಬಂದಿತ್ತೋ..ಅಥವಾ ದಾರಿ ತಪ್ಪಿಯೇ ಬಂದಿತ್ತೋ ಪಾಪ ಚಿರತೆ ಜನರ ಬಡಿತಕ್ಕೊಳಗಾಗಿ ಸತ್ತೆ ಹೋಗಿದೆ.
ಜನರ ಮೇಲೆ ದಾಳಿ ನಡೆಸಿದೆ ಎಂದು ಜನ ರೊಚ್ಚಿಗೆದ್ದು ಅದನ್ನು ಕೊಂದಿದ್ದಾರೆೆೆ ಎಂದು ಹೇಳಲಾಗುತ್ತಿದೆ.
ಚಿರತೆಯೊಂದು ಬಂದಿದೆ ಅದು ದಾಳಿ ಮಾಡುತ್ತಿದೆ ಎಂಬ ಆತಂಕದಿಂದ ಜನ ತೋಟಕ್ಮೆ, ಇತರೆ ಕೆಲಸಕ್ಕೆ ಹೋಗಲು ಆತಂಕಗೊಂಡಿರುವ ಹಿನ್ನೆಲೆ ಈ ದುರಂತ ನಡೆದಿದೆ ಎನ್ನಬಹುದು.