ಪ್ರಮುಖ ಸುದ್ದಿ
ನಾಳೆ ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆಗೆ ಸಿಎಂ ನಿರ್ಧಾರ!
ಬೆಂಗಳೂರು: ನಾಳೆಯೇ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದು ಹೈಕಮಾಂಡ್ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದ್ದಾರೆ ಎನ್ನಲಾಗಿದೆ. ಸಿಎಂ ಬಿಎಸ್ ವೈ ಅಂದುಕೊಂಡಂತೆ ಆದಲ್ಲಿ ನಾಳೆ ಸಂಜೆ ವೇಳೆಗೆ ಇಬ್ಬರು ಶಾಸಕರು ಸಚಿವ ಸಂಪುಟ ಸೇರಲಿದ್ದಾರೆ. ಶಾಸಕರಾದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ ನೂತನ ಸಚಿವರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.