ಪ್ರಮುಖ ಸುದ್ದಿ
ಲಾಠಿ ಪ್ರಹಾರ : ಸಂಯಮದಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಗದಗ : ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದ ಸಂದರ್ಭದಲ್ಲಿ ಕೊಣ್ಣೂರಿನಲ್ಲಿ ಸಂತ್ರಸ್ಥರ ಮೇಲೆ ಪೊಲೀಸರು ಲಾಠೀ ಪ್ರಹಾರ ಮಾಡಿರುವ ಪ್ರಕರಣದ ಬಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಇದೊಂದು ಖೇದಕರ ವಿಚಾರ. ಮೊದಲೇ ಪ್ರವಾಹದಿಂದ ಅಲ್ಲಿನ ಜನ ಕಷ್ಟದಲ್ಲಿರುತ್ತಾರೆ. ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಕೂಡದು, ಅಧಿಕಾರಿಗಳು ಮತ್ತು ಪೊಲೀಸರು ಸಂಯಮದಿಂದ ವರ್ತಿಸಬೇಕು. ಈನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನಿಡಿದ್ದೇನೆ. ಸಂತ್ರಸ್ಥರ ಮೇಲೆ ಲಾಠಿ ಪ್ರಹಾರ ಪ್ರಕರಣದ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.