ಪ್ರಮುಖ ಸುದ್ದಿ
‘ಸಿಎಂ ಸಿದ್ಧರಾಮಯ್ಯ ಕನಸಲ್ಲಿ ಟಿಪ್ಪು ಸುಲ್ತಾನ್!’
ಸಾಹಿತಿಗಳು ಎಡಬಿಡಂಗಿಗಳು – ಹೆಗಡೆ
ಬಾಗಲಕೋಟೆ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಈ ಕನ್ನಡ ಮಾಸದಲ್ಲಿ ಕನ್ನಡ ಕಣ್ಮಣಿಗಳ ಬಗ್ಗೆ ಕನಸು ಬೀಳಬೇಕಿತ್ತು. ಆದರೆ, ಅರೆನಿದ್ದೆ ಮಾಡಿದಾಗ ಕೆಟ್ಟ ಕನಸುಗಳು ಬೀಳುತ್ತವಂತೆ. ಹಾಗೆ ಸಿದ್ಧರಾಮಯ್ಯ ಕನಸಲ್ಲಿ ಟಿಪ್ಪು ಸುಲ್ತಾನ್ ಬರುತ್ತಿದ್ದಾನಂತೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಎರಡಕ್ಷರ ಬರೆದ ಗಂಜಿಗಿರಾಕಿ ಸಾಹಿತಿಗಳನ್ನು ಕಟ್ಟಿಕೊಂಡು ಸಿದ್ಧರಾಮಯ್ಯ ನಾಟಕವಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.