ಪ್ರಮುಖ ಸುದ್ದಿ
ಬಹಿರಂಗ ಚರ್ಚೆಗೆ ಬನ್ನಿ : ವಿಪಕ್ಷ ನಾಯಕರಿಗೆ ಸಿಎಂ ಪಂಥಾಹ್ವಾನ
ಧಾರವಾಡದಲ್ಲಿ ವಿಭಾಗ ಮಟ್ಟದ ಸೌಲತ್ತು ವಿತರಣಾ ಸಮಾವೇಶಕ್ಕೆ ಸಿಎಂ ಚಾಲನೆ
ಧಾರವಾಡ: ಕೋಮುವಾದಿ ನೀತಿ ಬಿಟ್ಟು ಅಭಿವೃದ್ಧಿ ಆಧಾರಿತ ವಿಷಯಗಳ ಬಗ್ಗೆ ಚರ್ಚೆಗೆ ಬನ್ನಿ. ವಿನಾಕಾರಣ ರಾಜಕೀಯಕ್ಕಾಗಿ ಆರೋಪ ಮಾಡುವುದನ್ನು ಬಿಡಿ. ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ. ಆಗ ನಿಮಗೆ ನಮ್ಮ ಅಭಿವೃದ್ಧಿ ಕಾರ್ಯಗಳು ಮನದಟ್ಟಾಗುತ್ತವೆ ಎಂದು ಸಿಎಂ ಸಿದ್ಧರಾಮಯ್ಯ ಅವರು ವಿಪಕ್ಷ ನಾಯಕರಿಗೆ ಪಂಥಾಹ್ವಾನ ನೀಡಿದ್ದಾರೆ.
ಧಾರವಾಡ ನಗರದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಬೆಳಗಾವಿ ವಿಭಾಗಮಟ್ಟದ ಸೌಲತ್ತು ವಿತರಣಾ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿ ಮಾತನಾಡಿದರು.
ನಾವು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ವಿಪಕ್ಷ ನಾಯಕ ಜಗಧೀಶ ಶೆಟ್ಟರ್ ನಮ್ಮ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರದ ಸಾಧನೆ ಬಗ್ಗೆ ಚರ್ಚಿಸಲು ಒಂದೇ ವೇದಿಕೆಯಲ್ಲಿ ಸೇರಿ ಚರ್ಚಿಸೋಣ ಬನ್ನಿ ಎಂದು ಸಿಎಂ ಸವಾಲೆಸೆದಿದ್ದಾರೆ.