ಸಿಎಂ ಅಭಿಮಾನಿಗಳಿಂದ ಹಣ್ಣು ಹಂಪಲು ವಿತರಣೆ
ಯಾದಗಿರಿ, ಶಹಾಪುರ; ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮ ದಿನ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಅವರ ಅಭಿಮಾನಿಗಳು ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ರವಿವಾರ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಅಶೋಕ ಕರಿಗೇರ, ಎಚ್.ಡಿ.ಕುಮಾರಸ್ವಾಮಿಯವರ 60 ನೇ ಜನ್ಮದಿನ ಅಂಗವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸುವ ಮೂಲಕ, ಸಿಎಂ ಕುಮಾರಸ್ವಾಮಿ ಅವರ ಜನ್ಮ ದಿನವನ್ನು ಸರಳವಾಗಿ ಆಚರಿಸಿದ್ದೇವೆ.
ದೇವರು ಅವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ, ನಾಡಿನ ಸೇವೆ ಮುಂದುವರೆಸಲಿ ಎಂದು ಆಶಿಸಿದರು. ಕುಮಾರಸ್ವಾಮಿ ಅವರಿಗೆ ಬಡವರು, ದೀನ ದಪಲಿತರು ರೈತರ ಬಗ್ಗೆ ಅಪಾರ ಕಾಳಜಿದೆ. ಅವರ ಕಾರ್ಯಯೋಜನೆಗಳು ಸಾಕಷ್ಟು ಸಾಮಾನ್ಯ ಜನರಿಗೆ ಬಡವರಿಗೆ ಉಪಯೋಗವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಉಪಾದ್ಯಕ್ಷ ಶರಣಗೌಡ ಮಾಲಹಳ್ಳಿ, ಅಲ್ಪಸಂಖ್ಯಾತ ವಿಭಾಗ ಅದ್ಯಕ್ಷ ಮಹ್ಮದ್ ಇಸ್ಮಾಯಿಲ್ ಸಂಗ್ರಾಮ, ಮರಿಲಿಂಗ ಹಳಿಸಗರ, ಅಬ್ದುಲ್ ವಹೀದ್, ಬಾಲು ಹೊಸುರು, ಸಿದ್ದಣ್ಣ ಕನ್ಯಾಕೋಳೂರ, ಶರಬಣ್ಣ ವಿಭೂತಿಹಳ್ಳಿ, ಅಸ್ಲಾಂ ಸೇರಿದಂತೆ ಇತರರು ಇದ್ದರು.