ಪ್ರಮುಖ ಸುದ್ದಿ
ನಾನು ಕನ್ನಡ ಚಲನಚಿತ್ರ ರಂಗದ ಡಿಕ್ಷನರಿ – ಸಿಎಂ ಕುಮಾರಸ್ವಾಮಿ
ಬಂಗಾರದ ಮನುಷ್ಯ 100 ಬಾರಿ ವೀಕ್ಷಣೆ- ಕುಮಾರಸ್ವಾಮಿ
ಮೈಸೂರುಃ ಡಾ.ರಾಜ್ ಅಭಿನಯದ ಬಂಗಾರದ ಮನುಷ್ಯ ಚಲನಚಿತ್ರವನ್ನು 100 ಬಾರಿ ನೋಡಿದ್ದೇನೆ. ಈಗಲೂ ಕನ್ನಡದ ಯಾವ ಚಲನಚಿತ್ರ ಎಷ್ಟು ಓಡಿದೆ ಅದರ ಕಲೆಕ್ಷನ್ ಎಷ್ಟು ಎಂಬುದನ್ನು ನಿಖರವಾಗಿ ಹೇಳಬಲ್ಲೆ. ಕನ್ನಡ ಚಿತ್ರರಂಗದ ಡಿಕ್ಷನರಿ ಇದ್ದಂಗೆ ನಾನು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ದಸರಾ ಉತ್ಸವ ಅಂಗವಾಗಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವಸಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ರಾಜಕುಮಾರ ಅವರ ಅಭಿನಯದ ಚಿತ್ರಗಳು ನನ್ನ ವ್ಯಕ್ತಿತ್ಬದ ಮೇಲೆ ಗಾಢವಾದ ಪರಿಣಾಮ ಬೀರಿವೆ. ಬಡವರಿಗೆ ಕೂಡಲೇ ಸಹಾಯ ಹಸ್ತ ಚಾಚುವದು ನನಗೆ ಡಾ.ರಾಜ್ ಅವರ ಚಿತ್ರ ನೋಡುವದರಿಂದ ಬಂದಿದೆ.
ಅಸಹಾಯಕರಿಗೆ ಬಡವರಿಗೆ ಸಹಕಾರ ನೀಡಬೇಕೆಂಬ ನನ್ನ ಮನೋಬಲ ಹೆಚ್ಚಾಗಲು.ಡಾ.ರಾಜ್ ಅವರು ನಟಿಸಿದ ನೂರಾರು ಚಿತ್ರಗಳಿಂದ ಪ್ರೇರಿಯನಾಗಿದ್ದೇನೆ ಎಂದರು.