ಆದಿಶಕ್ತಿ ಆಶ್ರಮದಲ್ಲಿ ನಟಿ ಕಂಗನಾ..! ಶಿವನ ಧ್ಯಾನದಲ್ಲಿ ನಟಿ
ಕೋಯಮತ್ತೂರಃ ಬಾಲಿವುಡ್ ಫೇಮಸ್ ನಟಿ ಕಂಗನಾ ರಣಾವತ್ ಸದ್ಯ ಯಾವುದೇ ಸಿನಿಮಾ ಅಭಿನಯದಲ್ಲಿ ತೊಡಗಿಸಿಕೊಳ್ಳದೆ, ಸೈಲಂಟಾಗಿ, ಇಲ್ಲಿನ ಆದಿಶಕ್ತಿ ಆಶ್ರಮದಲ್ಲಿ ಭೋಲೆನಾಥನ ಸೇವೆಯಲ್ಲಿ ತೊಡಗಿಸಿಕೊಂಡಿರುವ ಫೋಟೊ ಭಾವಚಿತ್ರಗಳು ಡಿಜಿಟಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಶ್ರಾವಣ ಮಾಸಕ್ಕೂ ಮುನ್ನಾ ಈ ನಟಿ ಆಶ್ರಮದಲ್ಲಿ ಚಂದದ ಸೀರೆಯುಟ್ಟು ಭೋಲೆನಾಥನ ಧ್ಯಾನದಲ್ಲಿ ಮಗ್ನಳಾಗಿದ್ದಾಳೆ. ಅಲ್ಲದೆ ನಿತ್ಯ ಅಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವುದು ಎಲ್ಲರ ಉಬ್ಬು ಹೇರುವಂತೆ ಮಾಡಿರುವುದು ಸುಳ್ಳಲ್ಲ.
ನಟಿ ಕಂಗನ ಅಭಿನಯದ ಯಾವುದೇ ಚಿತ್ರ ಈ ಬಾರಿ ತೆರೆಗೆ ಕಂಡಿರುವದಿಲ್ಲ. ಮುಂದಿನ ವರ್ಷ ಕಂಗನಾ ಅಭಿನಯದ ಮಣಿಕರ್ಣಿಕಾ ದಿ ಕಿಂಗ್ ಆಫ್ ಝಾನ್ಸಿ ಚಿತ್ರ ತೆರೆಗೆ ಬರಲಿದೆಯಂತೆ. ರಾಜ್ ಕುಮಾರ್ ರಾವ್ ಜೊತೆ ಮೆಂಟಲ್ ಹೇ ಕ್ಯಾ ಚಿತ್ರದಲ್ಲೂ ಕಂಗನಾ ನಟಿಸುತ್ತಿದ್ದಾಳೆ. ಆದಾಗ್ಯು ಬಿಝಿ ಶೆಡ್ಯೂಲ್ ನಡುವೆಯೇ ಕಂಗನಾ ದೇವರ ಮೊರೆ ಹೋಗಿರುವುದು ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ.
ಇಶಾ ಪೌಂಡೇಷನ್ ನಲ್ಲಿರುವ ಶಿವಲಿಂಗಕ್ಕೆ ನಟಿ ಕಂಗನಾ ಪೂಜೆ ಮಾಡುತ್ತಿರುವ ಫೋಟೊವನ್ನು ತಂಡ ಇನ್ಸ್ಟ್ಟಾಗ್ರಾಮ್ ನಲ್ಲಿ ಬಿತ್ತರಿಸಲಾಗಿದೆ.