JDS ಅಧಿಕಾರಕ್ಕೆ ಬರೋಲ್ಲ – ಗೌಡರ ತವರಲ್ಲಿ ಸಿಎಂ ಪುನರುಚ್ಚಾರ
ಹಾಸನ: ಭಾರತೀಯ ಜನತಾ ಪಕ್ಷ ಪರಿವರ್ತನಾ ಯಾತ್ರೆ ಹೊರಟಿದೆ. ಜಾತ್ಯಾತೀತ ಜನತಾದಳ ವಿಕಾಸ ಯಾತ್ರೆ ಹೊರಟಿದೆ. ಬಿಜೆಪಿಗೆ ಜನ ಐದು ವರ್ಷ ಅಧಿಕಾರ ಕೊಟ್ಟು ನೋಡಿದ್ದಾರೆ. ಭ್ರಷ್ಟಾಚಾರ ಹಾಗೂ ಸಚಿವರಿಂದ ಹಿಡಿದು ಸಿಎಂ ಆಗಿದ್ದವರೂ ಜೈಲಿಗೆ ಹೋಗಿದ್ದನ್ನು ಜನ ಕಂಡಿದ್ದಾರೆ. ಇನ್ನು
ಜೆಡಿಎಸ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಿಲ್ಲ. ಯಾವ ಪಕ್ಷ ಅಧಿಕ ಸ್ಥಾನ ಗಳಿಸುತ್ತದೆ ಎಂದು ಅವರು ನೋಡುತ್ತಿದ್ದಾರಷ್ಟೇ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಹಾಸನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು. ಈ ಹಿಂದೆ ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದಿದ್ದ ಸಿಎಂ ಮಾತಿಗೆ ಮಾಜಿ ಪ್ರಧಾನಿ ದೇವೇಗೌಡರು ಗರಂ ಆಗಿದ್ದರು. ಸಿಎಂ ಸಿದ್ಧರಾಮಯ್ಯ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ನಿಲ್ಲಿಸಲಿ ಎಂದು ಗುಡುಗಿದ್ದರು. ಆದರೆ, ಸಿಎಂ ಸಿದ್ಧರಾಮಯ್ಯ ಇಂದು ದೇವೇಗೌಡರ ತವರು ಕ್ಷೇತ್ರದಲ್ಲಿ ಮಾತನಾಡಿ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ. ಸತ್ಯವನ್ನು ಒಪ್ಪಿಕೊಳ್ಳಬೇಲು ಎಂದು ಪುನರುಚ್ಚರಿಸಿದ್ದಾರೆ.