ಪ್ರಮುಖ ಸುದ್ದಿ
ಕಮ್ಯೂನಲಿಸಂ vs ಸೆಕುಲರಿಸಂ ಕರ್ನಾಟಕ ಚುನಾವಣ ಕದನ – ಸಿಎಂ ಸಿದ್ಧರಾಯಮಯ್ಯ
ನವದೆಹಲಿ : ಕರ್ನಾಟಕ ರಾಜ್ಯದಲ್ಲಿ 2018ರ ವಿಧಾನಸಭೆ ಚುನಾವಣೆ ಕೋಮುವಾದ ಮತ್ತು ಜಾತ್ಯಾತೀತೆಯ ನಡುವಿನ ಸ್ಪರ್ದೆಯಾಗಲಿದೆ. ಕಾಂಗ್ರೆಸ್ ಈ ಸ್ಪರ್ದೆಯಲ್ಲಿ ವಿಜಯಾಲಿ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಮಹಾ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಗೆ ಕರ್ನಾಟಕ ಚುನಾವಣೆ ಮೈಲಿಗಲ್ಲಾಗಿ ಪರಿಣಮಿಸಲಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಲಿದೆ. ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕೋಮುವಾದಕ್ಕಿಂತ ಜಾತ್ಯಾತೀತಕ್ಕೆ ಹೆಚ್ಚಿನ ಒಲವು ಕಂಡು ಬರುವ ಲಕ್ಷಣಗಳು ಹೆಚ್ಚಿವೆ.
ಕೋಮುವಾದಕ್ಕಿಂತ ಜಾತ್ಯತೀತ ಮೌಲ್ಯಗಳು ಹೆಚ್ಚು ಅರ್ಥಪೂರ್ಣ.
ಸರ್ವ ಸಮುದಾಯಗಳನ್ನು ಸಮಾನತೆಯಿಂದ ಪ್ರಗತಿಯತ್ತ ಕೊಂಡೊಯ್ಯುವ ನಾಯಕರ ಅವಶ್ಯಕತೆವಿದೆ.