ಪ್ರಮುಖ ಸುದ್ದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಹೆಸರೇನು ಗೊತ್ತಾ?
ಮೈಸೂರು : ನನಗೆ ಸಿದ್ದರಾಮೇಗೌಡ ಅಂತ ಹೆಸರಿಡಲಾಗಿತ್ತು. ಆದರೆ, ನಮ್ಮಪ್ಪ ನನಗೆ ಶಾಲೆಗೆ ಸೇರಿಸಲು ಕರೆದೊಯ್ದಾಗ ರಾಜಪ್ಪ ಮೇಷ್ಟ್ರು ಅಂತ ಒಬ್ಬರಿದ್ದರು. ಸಿದ್ದರಾಮೇಗೌಡ ಎಂದು ಹೆಸರು ಹೇಳಿದಾಗ ಗೌಡ ಯಾಕೆ ಸಿದ್ದರಾಮಯ್ಯ ಸಾಕು ಅಂತ ಹಾಗೇ ಬರೆದುಕೊಂಡರು. ಆಗಿನಿಂದ ಸಿದ್ದರಾಮೇಗೌಡ ಹೋಗಿ ಸಿದ್ದರಾಮಯ್ಯ ಮಾತ್ರ ಉಳಿಯಿತು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ತಮ್ಮ ಬಾಲ್ಯ ಮತ್ತು ಮೂಲ ಹೆಸರು ನೆನೆದರು. ಅಂದು ರಾಜಪ್ಪ ಮೇಷ್ಟ್ರು ನನಗೆ ಐದನೇ ಕ್ಲಾಸಿಗೆ ಸೇರಿಸಿಕೊಳ್ಳದಿದ್ದರೆ ನಾನು ವಿದ್ಯಾವಂತ ಆಗುತ್ತಿರಲಿಲ್ಲ. ಜನ ಆಶೀರ್ವಾದ ಮಾಡದಿದ್ದರೆ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ಎಂದು ಸಿಎಂ ಹೇಳಿದರು.