ಪ್ರಮುಖ ಸುದ್ದಿ
ಯಾದಗಿರಿಃ ತ್ರಿವಳಿ ಮಕ್ಕಳಿಗೆ ಮತ್ತೆ ಬೇಬಿ ಕಿಟ್ ಕಳುಹಿಸಿದ ನಟ ಸೋನು ಸೂದ್
ತ್ರಿವಳಿ ಮಕ್ಕಳಿಗೆ ಮತ್ತೆ ಬೇಬಿ ಕಿಟ್ ಕಳುಹಿಸಿದ ನಟ ಸೋನು ಸೂದ್
ಯಾದಗಿರಿಃ ಆಗಸ್ಟ್ 22 ರಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ತ್ರೀವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ರಾಮಸಮುದ್ರ ಗ್ರಾಮದ ಪದ್ಮಾ ನಾಗರಾಜ, ಕುಟುಂಬದ ಮಕ್ಕಳಿಗೆ ಬಹುಭಾಷ ಬಾಲಿವುಡ್ ನಟ ಸೋನು ಸೂದ್ ಮತ್ತೆ ಬುಧವಾರ ಮುಂಬೈಯಿಂದ ಅಮೇಜಾನ ಬೇಬಿ ಕಿಟ್ ಗಳನ್ನು ಕಳುಹಿಸಿದ್ದಾರೆ.
ಕಿಟ್ ಗಳಲ್ಲಿ ಮಕ್ಕಳ ಸೋಪ್, ಎಣ್ಣೆ, ಶಾಂಪು, ಪೌಡರ್ ಹಾಗೂ ಇನ್ನಿತರ ವಸ್ತುಗಳು ಇವೆ ನಾಗರಾಜ ತಿಳಿಸಿದ್ದಾರೆ. ನಮ್ಮ ಕುಟುಂಬಕ್ಕೆ ಆಸರೆಯಾದ ನಟನಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಬಡ ಕುಟುಂಬಕ್ಕೆ ಮೂರು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಕಳುಹಿಸಿ ಅವರ ಜೊತೆ ಮಾತನಾಡಿ ಬರುವ ದಿನಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡುತ್ತೇನೆ ಎಂದು ನಟ ಸೋನು ಸೂದ್ ಭರವಸೆ ನೀಡಿದ್ದರು. ಅದರಂತೆ ಹಂತ ಹಂತವಾಗಿ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.