ಪ್ರಮುಖ ಸುದ್ದಿ
ರಾಜಕೀಯ ಗೊಂದಲಃ ಸಿಎಂ ಟೆಂಪಲ್ ರನ್
ರಾಜಕೀಯ ಗೊಂದಲಃ ಸಿಎಂ ಟೆಂಪಲ್ ರನ್
ಉಡುಪಿಃ ಸಿಎಂ ಯಡಿಯೂರಪ್ಪ ದಿನ ನಿತ್ಯ ರಾಜಕೀಯ ಗೊಂದಲದ ನಡುವೆ ಬೆಸತ್ತು ಇದೀಗ ಉಡುಪಿಯಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.
ಕುಂದಾಪುರ, ಉಡುಪಿಯ ಗಣೇಶ, ಮಹಾಲಕ್ಷ್ಮೀ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿತ್ಯ ರಾಜಕೀಯ ಗೊಂದಲದಲ್ಲಿರುತ್ತೆವೆ. ಅದನ್ನು ಮರೆತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಹಿನ್ನೆಲೆ ಪ್ರವಾಸ ಬಂದಿದ್ದೇನೆ.
ಅಲ್ಲದೆ ಲೋಕ ಕಲ್ಯಾಣಾರ್ಥವಾಗಿ ಕುಂದಾಪುರದ ಮಂದಿರ ವೊಂದರಲ್ಲಿ ನಡೆಯುತ್ತಿರುವ ಹೋಮ ಹವನದಲ್ಲಿ ಭಾಗವಹಿಸುತ್ತಿರುವ ಕುರಿತು ಮಾಹಿತಿ ನೀಡಿದರು.
ಅಲ್ಲದೆ ಗೋಹತ್ಯೆ ನಿಷೇಧ ಕುರಿತು ಮಾತನಾಡಿದ ಅವರು, ಗೋಹತ್ಯೆ ನಿಷೇಧ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು.
ಅದು ಇಲ್ಲಿಯವರೆಗೂ ಯಾರು ಜಾರಿಗೊಳಿಸಿರಲಿಲ್ಲ. ನಾವು ತಕ್ಷಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಇತರರು ಇದ್ದರು.