ಪ್ರಮುಖ ಸುದ್ದಿ
ಬ್ರೆಕಿಂಗ್ ನಿವ್ಸ್ ಃ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ಅನುದಾನ – ಸಿಎಂ ಬಿಎಸ್‍ವೈ
ಬೆಂಗಳೂರಃ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಈ ಬಾರಿ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಅನುದಾನ ಕಲ್ಪಿಸುವದಾಗಿ ಸಿಎಂ ಬಿಎಸ್‍ವೈ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರವಿವಾರ ನಡೆದ ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಭಾಗವಹಿಸಿದ್ದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಜೆಟ್ ನಲ್ಲಿ 500 ಕೋಟಿ ಮೀಸಲಿಡಲಾಗುವದು. ಚಿತ್ರದುರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸವ ಪುತ್ಥಳಿಗೆ ಈಗಾಗಲೇ ಸಾಕಷ್ಟು ಹಣ ನೀಡಿದ್ದು, ಮುಂದೆಯೂ ಅಗತ್ಯಗನುಸಾರವಾಗಿ ಹಣ ನೀಡಲಾಗುವದು ಎಂದು ಸಷ್ಟಪಡಿಸಿದರು. ಶಿವ ಶರಣರು ಯಾವುದೇ ಜಾತಿ, ಮತ ಪಂಥದ ಚೌಕಟ್ಟಿಲ್ಲದೆ ನಡೆದುಕೊಂಡು ಬಂದಿರುವದಕ್ಕೆ ಇವತ್ತಿನ ಈ ಗಣಮೇಳವೇ ಸಾಕ್ಷಿ ಎಂದು ಬಣ್ಣಿಸಿದರು.