ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ, ಕುರಿ, ಮೇಕೆ ಮೃತಪಟ್ಟಲ್ಲಿ 5 ಸಾವಿರ ಘೋಷಣೆ
ಆಶಾ ಕಾರ್ಯಕರ್ತೆಯರಿಗೆ ತಲಾ 3, ಕುರಿ, ಮೇಕೆ ಮೃತಪಟ್ಟಲ್ಲಿ 5 , ಮೆಕ್ಕೆ ಬೆಳೆಗಾರರಿಗೆ 5 ಸಾವಿರ ಘೋಷಣೆ
ಮೂರನೇಯ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ
ವಿವಿ ಡೆಸ್ಕ್ಃ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆಳೆಗೆ ಉತ್ತಮ ಬೆಲೆ ದೊರೆಯಲು ಸಹಕಾರ ನೀಡುವಂತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ, ಈಗಾಗಲೇ ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನಗೊಂಡಿದ್ದು,ಕರ್ನಾಟಕದಲ್ಲೂ ಎಪಿಎಂಸಿ ನೂತನ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಕೋವಿಡ್ – 19 ವಿಶೇಷ ಮೂರನೇಯ ಪ್ಯಾಕೇಜ್ ಘೋಷಣೇ ವೇಳೆ ಎಪಿಎಂಸಿ ಕಾಯ್ದೆ ಜಾರಿ ಕುರಿತು ಅವರು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ಘೋಷಣೆಃ ಮೂರನೇಯ ಪ್ಯಾಕೇಜ್ ಘೊಷಣೆ ಮಾಡಿದ ಸಿಎಂ, ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ, ಆಶಾ ಕಾರ್ಯಕರ್ತೆ ಯುರಿಗೆ ತಲಾ 3 ಸಾವಿರ ಸೇರಿದಂತೆ ಕುರಿ, ಮೇಕೆ ಮೃತಪಟ್ಟಲ್ಲಿ 5 ಸಾವಿರ ಹಣ ನೀಡಲು ಅವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ, ರೈತಪರವಾಗಿ ಹಿಂದೆ ಬಜೆಟ್ ಮಂಡನೆ ಮಾಡಿದ್ದ ನಾನು, ಹಸಿರು ಶಾಲು ಹೊತ್ತು ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ರೈತರಾರು ಹೆದರಬೇಕಿಲ್ಲ. ರೈತಾಪಿ ಜನರ ಅನುಕೂಲಕ್ಕೆ ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರಧಾನಿ ಮೋದಿಯವರು ಸಹ ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.