ಪ್ರಮುಖ ಸುದ್ದಿ
ಪತ್ರಕರ್ತರ ಮನವಿಗೆ ಸ್ಪಂಧಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರಃ ಪತ್ರಕರ್ತರಿಗೂ ಕೋವಿಡ್ ವಿಮಾ ಪರಿಹಾರ ಸೌಲಭ್ಯ ಒದಗಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಸಿದ ಮನವಿಗೆ ತಕ್ಷಣಕ್ಕೆ ಸ್ಪಂಧಿಸಿದ ಸಿಎಂ ಯಡಿಯೂರಪ್ಪ ಇತ್ತೀಚೆಗೆ ಮೃತಪಟ್ಟಿದ್ದ ಬೆಂಗಳರ ವಿಜಯ ಕರ್ನಾಟಕದ ಹಿರಿಯ ಪತ್ರಕರ್ತ ಗೌರಿಪುರ ಚಂದ್ರು ಹಾಗೂ ಬೇಲೂರ ಪ್ರಜಾವಾಣಿ ವರದಿಗಾರ ಬಿ.ಎಂ.ರವೀಶ್ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮಂಜೂರ ಮಾಡಿದ್ದಾರೆ.
ಮೃತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಧನ ಮಂಜೂರ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ತೀಕ್ಷಣ ಮಾನವೀಯತೆ ಮೆರೆದಿದ್ದಾರೆ. ಅವರ ಕಾರ್ಯವೈಖರಿಗೆ ಸಂಘ ಅಭಿನಂದನೆ ಸಲ್ಲಿಸಿದೆ.