ಪ್ರಮುಖ ಸುದ್ದಿ
ಕುರುಬ ಸಮಾಜದವರಲ್ಲಿ ಕ್ಷಮೆ ಕೋರಿದ ಸಿಎಂ BSY
ನಾಳೆ (ನ.21) ಪ್ರತಿಭಟನೆ, ಬಂದ್ ಹಿಂಪಡೆಯುವಂತೆ ಸಿಎಂ ಮನವಿ
ಬೆಂಗಳೂರಃ ಕನಕ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಶಾಂತಿಸಭೆಯಲ್ಲಿ ಮಾತನಾಡಿರುವದಕ್ಕೆ ಈಗಾಗಲೇ ವಿಷಾಧ ವ್ಯಕ್ತಪಡಿಸಿದ್ದಾರೆ. ನಾಳೆ ಕುರುಬ ಸಮಾಜದವರಿಂದ ಯಾವುದೇ ಬಂದ್ ಪ್ರತಿಭಟನೆ ಬೇಡ ಆ ವಿಚಾರವಾಗಿ ನಾನು ಕ್ಷಮೆ ಕೋರುವೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಉಪ ಚುನಾವಣೆ ಮುಗಿದ ನಂತರ ಕನಕ ವೃತ್ತ ಸ್ಥಾಪಿಸಲಾಗುವದು ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.