ದೇವೇಗೌಡರು ಯಾರ ಪರವಾಗಿದ್ದಾರೆ ಎಂಬುದು ಸ್ಪಷ್ಟ ಪಡಿಸಲಿ-ಸಿದ್ರಾಮಯ್ಯ
ಯಾವುದೇ ಕಾರಣಕ್ಕೂ ಯಡಿಯೂರಪ್ಪ ಸಿಎಂ ಆಗಲ್ಲ.!
ಮೈಸೂರು: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ವಿಚಾರ ನನಗೆ ಗೊತ್ತಿಲ್ಲ. ನಾನು ಯಾವ ಟಿವಿ ವರದಿಯೂ ನೋಡಿಲ್ಲ. ಆದರೆ ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಸಿಎಂ ಸಿದ್ರಾಮಯ್ಯ ನಗರದಲ್ಲಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಸಮೀಕೆ ಮಾಡಿಸಿದ್ದೇನೆ. ಮೊದಲ ಹಂತದ ಸಮೀಕ್ಷೆ ಮುಗಿದಿದೆ. ಎರಡನೇ ಹಂತದ ಸಮೀಕ್ಷೆ ಮಾಡಿಸಲಿದ್ದೇನೆ. ರಾಜ್ಯದಲ್ಲಿ ಅತಂತ್ರ ಸ್ಥಿತಿ ಸಾಧ್ಯವಿಲ್ಲ. ನಮ್ಮ ಸಮೀಕ್ಷೆ ಮಾಹಿತಿ ಬಹಿರಂಗ ಪಡಿಸಲ್ಲ. ಅದು ಆಂತರಿಕ ಸಮೀಕ್ಷೆಯಾಗಿದೆ. ಏನೇ ಆದರೂ ಯಡಿಯೂರಪ್ಪ ಮಾತ್ರ ಸಿಎಂ ಆಗಲ್ಲ ಎಂದು ತಮ್ಮದೆ ಶೈಲಿಯಲ್ಲಿ ಹೇಳಿದರು.
ದೇವೆಗೌಡರು ಯಾರ ಪರವಾಗಿದ್ದಾರೆ.? ಸ್ಪಷ್ಟ ಪಡಿಸಲು ಸಿಎಂ ಸವಾಲ್
ದೇವೆಗೌಡರು ಯಾರ ಪರವಾಗಿದ್ದಾರೆ ಎಂಬುದು ಮೊಲು ಸ್ಪಷ್ಟ ಪಡಿಸಲಿ ಎಂದು ಸಿಎಂ ಸಿದ್ರಾಮಯ್ಯ ಇದೇ ವೇಳೆ ಸವಾಲ್ ಹಾಕಿದರು. ಬಳ್ಳಾರಿಯಲ್ಲಿ ರಾಜ್ಯ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕೃಷಿ ಹೊಂಡ, ಅಕ್ಕಿ ಹಂಚಿಕೆ, ಹಾಲು ಉತ್ಪಾದಕರ ವಿಚಾರವಾಗಿ ದೇವೆಗೌಡರ ನಿಲುವು ಏನು.? ಎಂಬುದನ್ನು ತಿಳಿಸಲಿ ಎಂದ ಅವರು,
ಜೆಡಿಎಸ್ ನಿಮ್ಮ ಪರವಾಗಿ ಸಾಫ್ಟ್ ಕಾರ್ನರ್ ವಿಚಾರವಿದೆ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಸಿಎಂ ಅವರು, ಯಾವ ಸಾಫ್ಟ್ ಇಲ್ಲ ಹಾರ್ಡ್ ಇಲ್ಲ ಎಂದರು.
ಮಣಿಶಂಕರ್ ಅಯ್ಯರ-ಅನಂತಕುಮಾರ ಹೆಗಡೆ
ಮಣಿಶಂಕರ ಅಯ್ಯರ ಅವರು ದೇಶದ ಪ್ರಾಧನಿ ಮೋದಿಯವರಿಗೆ ನೀಚ ಎಂಬ ಪದ ಬಳಸಿದ ಹಿನ್ನೆಲೆಯಲ್ಲಿ ಅಯ್ಯರ ಅವರನ್ನು ಪಕ್ಷದಿಂದ ತೆಗೆದು ಹಾಕುವ ಮೂಲಕ ರಾಹುಲ್ ಗಾಂಧಿಯವರ ಸಂಸ್ಕೃತಿ ಎಂತಹದ್ದು ಎಂಬುದನ್ನು ತೋರಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು, ಬಾಯಿಗೆ ಬಂದಂತೆ ಮಾತನಾಡಿದರೆ ಬಿಜೆಪಿ ಸಮರ್ಪಕ ಸಮರ್ಥನೆಗೆ ಮುಂದಾಗುತ್ತಿದೆ. ಅವರ ಮೇಲೆ ಕ್ರಮಕ್ಕೆ ಮುಂದಾಗುತ್ತಿಲ್ಲ ಇದು ಬಿಜೆಪಿಯವರ ಸಂಸ್ಕೃತಿ ತೋರಿಸುತ್ತದೆ ಎಂದರು.
ಪ್ರತಾಪ ಸಿಂಹನ ಪ್ರತಾಪ ಕುರಿತು..
ಹುಣಸೂರಿನಲ್ಲಿ ಹನುಮ ಜಯಂತಿ ಮಾಡಬಾರದು ಎಂದು ಜಿಲ್ಲಾಡಳಿತ ಸೂಚಿಸಿಲ್ಲ. ಸಂಸದ ಪ್ರತಾಪ ಸಿಂಹ ಪ್ರತಿಷ್ಠೆಯಿಂದಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವೇ ಮಾಡಿದ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಸಿಎಂ ಸಿದ್ರಾಮಯ್ಯ ಹೇಳಿದರು.
ನಾವು ಸಹ ಹನುಮ, ರಾಮನ ಪೂಜೆ ಮಾಡುತ್ತೇವೆ. ಊರಿನಲ್ಲಿ ಹಬ್ಬ ಆಚರಿಸುತ್ತೇವೆ ಬಿಜೆಪಿ ಮಾತ್ರ ಹಬ್ಬ ಮಾಡುವುದಿಲ್ಲ. ಟಿಪ್ಪು ಜಯಂತಿ ಆಚರಣೆಗೆ ಬಿಡುವುದಿಲ್ಲ ಎಂದ ಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು ಎಂದರು.